ETV Bharat / state

ಹುಬ್ಬಳ್ಳಿ ಶಿರಡಿ ಸಾಯಿ ಮಂದಿರ ಜಾಗದ ಲೀಸ್ ಅವಧಿ 30 ವರ್ಷ ಮುಂದುವರಿಕೆ - ಲೋಕೋಪಯೋಗಿ ಇಲಾಖೆ

Shirdi Sai Mandir lease extended: ಹುಬ್ಬಳ್ಳಿಯ ಶ್ರೀ ಶಿರಡಿ ಸಾಯಿ ಮಂದಿರಕ್ಕೆ ಲೋಕೋಪಯೋಗಿ ಇಲಾಖೆಯ ಜಾಗವನ್ನು 30 ವರ್ಷಗಳವರೆಗೆ ಲೀಸ್​ ಆಧಾರದಡಿ ಮುಂದುವರೆಸಲು ಸರ್ಕಾರ ಅನುಮತಿ ನೀಡಿದೆ.

Shirdi Sai Mandir
ಶಿರಡಿ ಸಾಯಿ ಮಂದಿರ
author img

By ETV Bharat Karnataka Team

Published : Nov 24, 2023, 12:34 PM IST

ಹುಬ್ಬಳ್ಳಿ: ನಗರದ ಹಳೆಯ ಕೋರ್ಟ್ ಹತ್ತಿರದ ಲೋಕೋಪಯೋಗಿ ಇಲಾಖೆಯ ಸಿಟಿಸಿ‌ನಂ. 498 ರಲ್ಲಿನ 100x106 ಅಡಿ‌ ಜಾಗವನ್ನು ಶ್ರೀ ಶಿರಡಿ ಸಾಯಿ ಮಂದಿರಕ್ಕೆ ಮತ್ತೆ 30 ವರ್ಷಗಳವರೆಗೆ ಲೀಸ್​ ಆಧಾರದ ಮೇಲೆ ಮುಂದುವರೆಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧಾರ ತೆಗೆದುಕೊಂಡಿತು. ಲೋಕೋಪಯೋಗಿ ಇಲಾಖೆ ಈ‌ ಜಾಗವನ್ನು ಜಿಲ್ಲಾಧಿಕಾರಿ ಆದೇಶದ ಮೇಲೆ 28-08-1992 ಹಾಗೂ 05-02-1993ರಲ್ಲಿ ವಾರ್ಷಿಕ 3,000 ರೂಪಾಯಿ ಬಾಡಿಗೆಯಂತೆ ಲೀಸ್‌ಗೆ ನೀಡಲಾಗಿತ್ತು. ಇದರ ಲೀಸ್ ಅವಧಿ 02-04-2023ಕ್ಕೆ ಮುಕ್ತಾಯವಾಗಿದ್ದು, ಮತ್ತೆ ಸಾಯಿಬಾಬಾ ಭಕ್ತ ಮಂಡಳಿ ಲೀಸ್ ಅವಧಿ ಮುಂದುವರೆಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು.

ಈ ಮನವಿಗೆ ಸ್ಪಂದಿಸಿದ ಸರ್ಕಾರ 05-02-2023ಕ್ಕೆ ಪೂರ್ವಾನ್ವಯವಾಗುವಂತೆ ವಾರ್ಷಿಕ ರೂ. 20,000 ನಿಗದಿಪಡಿಸಿ ಮುಂದಿನ 30 ವರ್ಷಗಳ ಅವಧಿಯವರೆಗೆ ಲೀಸ್ ಅವಧಿ ವಿಸ್ತರಿಸಿದೆ.‌ ಇದೇ ವೇಳೆ ಜಿಲ್ಲೆಗೆ ಸಂಬಂಧಿಸಿ ಮತ್ತೊಂದು ಮಹತ್ವದ ನಿರ್ಧಾರ ಸರ್ಕಾರ ತೆಗೆದುಕೊಳ್ಳಲಾಗಿದೆ. ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಯ ಆವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿಗೆ ರೂ.16.18 ಕೋಟಿಗಳ ಮತ್ತು ಸ್ನಾತಕ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ರೂ. 11.00 ಕೋಟಿಗಳ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಸಂಪುಟ ಆಡಳಿತಾತ್ಮಕವಾಗಿ ಅನುಮೋದಿಸಿದೆ.

ಇದನ್ನೂ ಓದಿ: ರಾಯಚೂರು: ನಿರ್ವಹಣೆ ಇಲ್ಲದೆ ಕಣ್ಣುಮುಚ್ಚಿರುವ ಸಿಸಿ ಕ್ಯಾಮೆರಾಗಳು

ಇವುಗಳಲ್ಲದೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆಯ ಬಹುತೇಕ ಪ್ರಕರಣಗಳಲ್ಲಿ ಯಜಮಾನರು ಊರಿನಲ್ಲಿ ಇಲ್ಲದ ಕಾರಣ ತಾಂತ್ರಿಕ ಸಮಸ್ಯೆ ಆಗಿರುವುದರಿಂದ ಎರಡನೇ ಹಿರಿಯ ವ್ಯಕ್ತಿಯ ಖಾತೆಗೆ ಹಣ ವರ್ಗಾಯಿಸುವ ಕುರಿತಂತೆ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. 2024ನೇ ಸಾಲಿನ ಸಾರ್ವತ್ರಿಕ ರಜಾ ಪಟ್ಟಿ ಹಾಗೂ ಪರಿಮಿತ ರಜಾ ದಿನಗಳಿಗೆ ಅನುಮೋದನೆ ಸಿಕ್ಕಿದ್ದು, 2024 ಸಾಲಿನಲ್ಲಿ ಒಟ್ಟು 21 ದಿನಗಳನ್ನು ಸಾರ್ವತ್ರಿಕ ರಜಾ ದಿನಗಳೆಂದು ಘೋಷಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.