ಹುಬ್ಬಳ್ಳಿ: ಸಾಲಬಾಧೆ ತಾಳಲಾರದೆ ಉದ್ಯಮಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ನೀಲಿಜನ್ ರಸ್ತೆಯಲ್ಲಿರುವ ರಸಗೊಬ್ಬರದ ಅಂಗಡಿಯಲ್ಲಿ ನಡೆದಿದೆ.
ಆಗ್ರೋ ಮಳಗಿಯ ಮಾಲೀಕ ನಾಗನಗೌಡ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡವರು. ಇವರು ಕುತ್ತಿಗೆಗೆ ಪತ್ನಿಯ ಸೀರೆ ಬಿಗಿದು ಅಂಗಡಿಯಲ್ಲೇ ಸಾವಿಗೆ ಶರಣಾಗಿದ್ದಾರೆ.
ಉಪನಗರ ಪೊಲೀಸ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮಾಜಿ ಪ್ರಧಾನಿ ದೇವೇಗೌಡರೂ ಬೇಕಾದಷ್ಟು ಯಾತ್ರೆ ಮಾಡಿದ್ದರು.. ಅದಕ್ಕೆ ಏನೆನ್ನಬೇಕು?: ಡಿಕೆಶಿ ಪ್ರಶ್ನೆ