ETV Bharat / state

ಧಾರವಾಡದ ಕನ್ನಡ ತೇರು: ಬಸ್​ಗೆ ಸಿಂಗರಿಸಿ ಸಂಚರಿಸುವ ಸಾರಿಗೆ ನೌಕರ - Bus decoration for Karnataka Rajyotsava in Dharwad

ನವಲಗುಂದ ತಾಲೂಕಿನ‌ ಶಿರೂರು ಗ್ರಾಮದ ಕೆಎಸ್ಆರ್​ಟಿಸಿ ನೌಕರೊಬ್ಬರು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನದಂದು ಬಸ್​ಗೆ ಅಲಂಕರಿಸಿ ಇಡೀ ದಿನ ಕನ್ನಡ ಹಾಡುಗಳನ್ನು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆ. ಇವರ ಕನ್ನಡ ಪ್ರೇಮಕ್ಕೆ ಸಾರಿಗೆ ನೌಕರ ವಲಯ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪೇಡಾನಗರಿಯಲ್ಲೊಂದು ಕನ್ನಡದ ತೇರು
ಪೇಡಾನಗರಿಯಲ್ಲೊಂದು ಕನ್ನಡದ ತೇರು
author img

By

Published : Nov 1, 2020, 10:56 AM IST

ಧಾರವಾಡ: ಇಂದು ನಾಡಿನಾದ್ಯಂತ ಕರ್ನಾಟಕ ರಾಜ್ಯೋತ್ಸವದ ಸಂಭ್ರಮ ಮನೆಮಾಡಿದೆ. ಎಲ್ಲೆಡೆ ಕನ್ನಡದ ಡಿಂಡಿಮ ಬಾರಿಸುತ್ತಿದೆ. ಧಾರವಾಡದಲ್ಲೋರ್ವ ತಾನು ಕರ್ತವ್ಯ ನಿರ್ವಹಿಸುವ ಬಸ್​ಗೆ ಸಿಂಗರಿಸುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ.

ಜಿಲ್ಲೆಯ ನವಲಗುಂದ ತಾಲೂಕಿನ‌ ಶಿರೂರು ಗ್ರಾಮದ ಕೆಎಸ್ಆರ್​ಟಿಸಿ ನೌಕರೊಬ್ಬರು ಪ್ರತಿ ವರ್ಷ ಕನ್ನಡ ರಾಜ್ಯೋತ್ಸವದ ದಿನದಂದು ಬಸ್​ಗೆ ಅಲಂಕರಿಸಿ ಇಡೀ ದಿನ ಕನ್ನಡ ಹಾಡುಗಳನ್ನು ಹಾಕಿಕೊಂಡು ಕರ್ತವ್ಯ ನಿರ್ವಹಿಸುತ್ತಾರೆ. ಶಿರೂರು ಗ್ರಾಮದ ಮಲ್ಲಿಕಾರ್ಜುನ ಒಗೆಣ್ಣವರ ಗ್ರಾಮಸ್ಥರೊಂದಿಗೆ ಸೇರಿಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಬಸ್​ಗೆ ಸಿಂಗಾರ ಮಾಡುತ್ತಾರೆ. ಸುಮಾರು ಹತ್ತು ವರ್ಷಕ್ಕೂ ಅಧಿಕ ಕಾಲ ಕೆಎಸ್ಆರ್​ಟಿಸಿ ನೌಕರರಾಗಿ ಕೆಲಸ ಮಾಡುತ್ತಿರುವ ಇವರು ಪ್ರತಿವರ್ಷ ಬಸ್​ಗೆ ಅಲಂಕಾರ ಮಾಡಿ, ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಬಸ್​ನಲ್ಲಿ ಕನ್ನಡದ ಹಿರಿಯ ಸಾಹಿತಿಗಳು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ವಿವಿಧ ಮಹನೀಯರ ಭಾವಚಿತ್ರ ಹಾಕಿ ಹೂವಿನಿಂದ ಸಿಂಗರಿಸುತ್ತಾರೆ. ಇವರ ಕನ್ನಡ ಪ್ರೇಮಕ್ಕೆ ಸಾರಿಗೆ ನೌಕರ ವಲಯ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.