ಹುಬ್ಬಳ್ಳಿ: ಬಹು ನಿರೀಕ್ಷಿತ ಬಿಆರ್‍ಟಿಎಸ್ ಬಸ್ಗಳಿಗೆ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.
ಇದೇ ವೇಳೆ, ಹು-ಧಾ ಬಿಆರ್‍ಟಿಎಸ್ ಕಂಪನಿ ವತಿಯಿಂದ ಹು-ಧಾ ಬಿಆರ್‍ಟಿಎಸ್ ಯೋಜನೆ ಮತ್ತು ವಾ.ಕ.ರ.ಸಾ.(ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ) ಸಂಸ್ಥೆ ಬಸ್ ನಿಲ್ದಾಣಗಳ ಉದ್ಘಾಟನೆ ಶಿಲಾಫಲಕವನ್ನು ಉಪರಾಷ್ಟ್ರಪತಿಗಳು ಅನಾವರಣಗೊಳಿಸಿದರು. ಬಳಿಕ ಬಿಆರ್‍ಟಿಎಸ್ ಬಸ್ ಏರಿ ನವನಗರ ಟರ್ಮಿನಲ್ವರೆಗೆ ಪ್ರಯಾಣ ಬೆಳೆಸಿದ ಅವರು ಸಾರ್ವಜನಿಕರತ್ತ ಕೈ ಬೀಸಿದರ.
ಕೇಂದ್ರ ಸಂಸದೀಯ ವ್ಯವಹಾರಗಳ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವ ಜಗದೀಶ ಶೆಟ್ಟರ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ರು. NWKSRTC ಎಂ.ಡಿ. ರಾಜೇಂದ್ರ ಚೋಳನ್ ಕಾರ್ಯಕ್ರಮಕ್ಕೆ ಸಾಥ್ ನೀಡಿದರು.