ಧಾರವಾಡ: ರಾಯಾಪುರ ಬಳಿ ಅಡ್ಡ ಬಂದ ಬೈಕ್ ತಪ್ಪಿಸಲು ಹೋಗಿ ಬಿಆರ್ಟಿಎಸ್ ಬಸ್ ಒಂದು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದಿದೆ.
ಬಿಆರ್ಟಿಎಸ್ ಕಾರಿಡಾರ್‌ನಲ್ಲಿ ಬೈಕ್ ಸವಾರ ಏಕಾಏಕಿ ಅಡ್ಡಬಂದ ಕಾರಣ ಅಪಘಾತ ತಪ್ಪಿಸಲು ಹೋಗಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಕಾರಿಡಾರದಿಂದ ಬಸ್ ಹೊರಬಂದಿದೆ. ಬೈಕ್ ಸವಾರ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಬಳಿಕ ಬೈಕ್ ಸವಾರನ ಸಂಬಂಧಿ ಬಸ್ ಮೇಲೆ ದಾಳಿ ನಡೆಸಿದ್ದಾರೆ.
ಮುರಿದ ಬ್ಯಾರಿಕೇಡ್ ಹತ್ತಿ ಬಸ್ ಗಾಜು ಒಡೆದ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಲಾಟೆ ಮಾಡಿದ ಇಬ್ಬರನ್ನು ವಿದ್ಯಾಗಿರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.