ETV Bharat / state

ಧಾರವಾಡ: ತವರಿಗೆ ಬಂದಿದ್ದ ಸ್ವಂತ ತಂಗಿಯನ್ನೇ ಹತ್ಯೆ ಮಾಡಿದ ಪಾಪಿ ಅಣ್ಣ - ಸ್ವಂತ ತಂಗಿಯನ್ನೆ ಹತ್ಯೆ ಮಾಡಿದ ಪಾಪಿ ಅಣ್ಣ

ಕ್ಷುಲ್ಲಕ ಕಾರಣಕ್ಕೆ ಅಣ್ಣ, ತಂಗಿಯ ಮಧ್ಯೆ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಸ್ವಂತ ಅಣ್ಣನೇ ತಂಗಿಯನ್ನ ಹರಿತವಾದ ಆಯುಧದಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನವಲಗುಂದ ಪಟ್ಟಣದಲ್ಲಿ ನಡೆದಿದೆ.

ಸ್ವಂತ ತಂಗಿಯನ್ನೆ ಹತ್ಯೆ ಮಾಡಿದ ಪಾಪಿ ಅಣ್ಣ
ಸ್ವಂತ ತಂಗಿಯನ್ನೆ ಹತ್ಯೆ ಮಾಡಿದ ಪಾಪಿ ಅಣ್ಣ
author img

By

Published : Oct 26, 2021, 4:46 PM IST

ಧಾರವಾಡ : ಸ್ವಂತ ತಂಗಿಯನ್ನೇ ಖಾರದ ಪುಡಿ ಎರಚಿ ಪಾಪಿ ಅಣ್ಣನೊಬ್ಬ ಹತ್ಯೆ ಮಾಡಿದ ಘಟನೆ ಜಿಲ್ಲೆಯ ನವಲಗುಂದ ಪಟ್ಟಣದ ಕಲ್ಮೇಶ್ವರ ಗುಡಿ ಬಳಿ ನಡೆದಿದೆ. ಶಶಿಕಲಾ ಸುಣಗಾರ ಹತ್ಯೆಯಾದ ದುರ್ದೈವಿ.

ಕ್ಷುಲ್ಲಕ ಕಾರಣಕ್ಕೆ ಅಣ್ಣ, ತಂಗಿಯ ಮಧ್ಯೆ ಗಲಾಟೆ ನಡೆದಿದ್ದು, ಈ ಗಲಾಟೆಯಲ್ಲಿ ಸ್ವಂತ ಅಣ್ಣನೇ ತಂಗಿಯನ್ನ ಹರಿತವಾದ ಆಯುಧದಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಮಹಾಂತೇಶ್ ಶರಣಪ್ಪನವರ ಹತ್ಯೆ ಮಾಡಿದ ಪಾಪಿ ಅಣ್ಣ. ತಂಗಿ ಶಶಿಕಲಾ ಸುಣಗಾರ ಗಂಡನ ಮನೆಯಿಂದ ತವರು ಮನೆಗೆ ಬಂದಿದ್ದರು. ಈ ವೇಳೆ, ನಡೆದ ಗಲಾಟೆಯಲ್ಲಿ ತಂಗಿ ಶಶಿಕಲಾಗೆ ಹರಿತವಾದ ಆಯುಧದಿಂದ ಹೊಡೆದು ಕೊಲೆ ಮಾಡಲಾಗಿದೆ. ಹತ್ಯೆ ಬಳಿಕ ಮಹಾಂತೇಶ್ ಪರಾರಿಯಾಗಿದ್ದು, ಸದ್ಯ ಸ್ಥಳಕ್ಕೆ ನವಲಗುಂದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.