ETV Bharat / state

ಅನಿವಾಸಿ ಭಾರತೀಯರು ದೇಶದಲ್ಲಿ ಹೆಚ್ಚು ದಿನ ಉಳಿಯಲು ಅವಕಾಶ ನೀಡಿ: ನಾರಾಯಣ ಮೂರ್ತಿ - ಈಟಿವಿ ಭಾರತ ಕನ್ನಡ

ಎನ್​ಆರ್‌ಐ​ಗಳು ದೇಶದಲ್ಲಿ ಹೆಚ್ಚು ಕಾಲ ಕಳೆಯಲು ಅವಕಾಶ ನೀಡಬೇಕೆಂದು ಎನ್​.ಆರ್.ನಾರಾಯಣ ಮೂರ್ತಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Narayana Murthy
ನಾರಾಯಣ ಮೂರ್ತಿ
author img

By

Published : Feb 5, 2023, 8:21 AM IST

Updated : Feb 5, 2023, 8:59 AM IST

ಹುಬ್ಬಳ್ಳಿ: ಅನಿವಾಸಿ ಭಾರತೀಯರಿಗೆ (ಎನ್​ಆರ್​ಐ) 183 ದಿನಗಳ ಕಾಲ ಭಾರತದಲ್ಲಿ ಉಳಿಯಲು ಅವಕಾಶ ನೀಡುವ ಹಳೆಯ ಕಾನೂನನ್ನು ಮರಳಿ ಜಾರಿಗೆ ತರಬೇಕು ಎಂದು ಇನ್ಫೋಸಿಸ್​ ಸಹ ಸಂಸ್ಥಾಪಕರಾದ ಎನ್​.ಆರ್.ನಾರಾಯಣ ಮೂರ್ತಿ ಹೇಳಿದರು. ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ದೇಶಪಾಂಡೆ ಪ್ರತಿಷ್ಠಾನದ 14ನೇ ಅಭಿವೃದ್ಧಿ ಸಂವಾದದಲ್ಲಿ ಮಾತನಾಡಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ಗೆ ಈ ಮನವಿ ಮಾಡಿದ್ದಾರೆ.

"ದೇಶದ ಮೇಲೆ ಪ್ರೀತಿ, ಅಭಿಮಾನ ಇಟ್ಟುಕೊಂಡಿರುವ ಅನಿವಾಸಿ ಭಾರತೀಯರು ಇಲ್ಲಿಗೆ ಬಂದು ಸಂತೋಷದಿಂದ ಕಾಲ ಕಳೆಯುತ್ತಾರೆ. ಅವರಿಗೆ ರಾಷ್ಟ್ರಾಭಿಮಾನವಿದೆ. ಕೆಲವು ಅನಿವಾರ್ಯತೆಗಾಗಿ ಇಲ್ಲಿಗೆ ಬರುತ್ತಾರೆ. ಅವರನ್ನು ನಾವು ಮುಕ್ತವಾಗಿ ಸ್ವಾಗತಿಸಬೇಕು. ಅವರಿಗೆ ದೇಶದಲ್ಲಿ ಉಳಿಯಲು ಮತ್ತು ಕಾಲ ಕಳೆಯಲು 183 ದಿನಗಳ ಕಾಲಾವಕಾಶ ನೀಡಬೇಕು" ಎಂದರು.

ಇದನ್ನೂ ಓದಿ: ಬಜೆಟ್‌ನಲ್ಲಿ ಚಿನ್ನದ ಮೇಲಿನ ಆಮದು ಸುಂಕ ಹೆಚ್ಚಳ: ಆಭರಣ ಪ್ರಿಯರಿಗೆ ಶಾಕ್‌! ಹೀಗಿದೆ ಹೊಸ ದರ..

ಲಾಭವೇನು?: "ಆರ್ಥಿಕ ವರ್ಷದಲ್ಲಿ ಅನಿವಾಸಿ ಭಾರತೀಯರ ವಾಸ್ತವ್ಯವನ್ನು 183 ದಿನಗಳಿಂದ 120 ದಿನಗಳಿಗೆ ಇಳಿಸುವ ನಿರ್ಧಾರವನ್ನು ಸರ್ಕಾರ ಮಾಡಿದೆ. ಭಾರತದ ಒಳಿತಾಗಿ ಶ್ರಮಿಸುವ 63 ದಿನಗಳನ್ನು ಕಳೆದುಕೊಳ್ಳುವ ನಿರ್ಧಾರ ಸರಿಯಲ್ಲ. ಈ ನಿಟ್ಟಿನಲ್ಲಿ ಹಳೆಯ ಕಾನೂನಿನಂತೆ ಸ್ಥಳೀಯ ಜನರ ಜೀವನವನ್ನು ಉತ್ತಮಗೊಳಿಸುವ ಎನ್​ಆರ್​ಐಗಳಿಗೆ ಹೆಚ್ಚು ಕಾಲ ದೇಶದಲ್ಲಿ ಉಳಿಯಲು ಕಾಲಾವಕಾಶ ನೀಡಬೇಕು" ಎಂದು ಅವರು ಹೇಳಿದರು.

"ದೇಶದ ಹಳ್ಳಿಯ ಬಡ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ, ಪೋಷಣೆ ಮತ್ತು ಆಶ್ರಯ ಒದಗಿಸುವುದರಲ್ಲಿ ಎನ್​ಆರ್​ಐಗಳ ಪಾತ್ರ ಮಹತ್ವದ್ದು. ಇವೆಲ್ಲವನ್ನೂ ತ್ವರಿತವಾಗಿ ಸಾಧಿಸಲು ಅನಿವಾಸಿ ಭಾರತೀಯನ್ನು ಭಾರತಕ್ಕೆ ಸ್ವಾಗತಿಸಬೇಕು. ಅಗತ್ಯವೆನಿಸಿದರೆ ಅವರ ವಾಸ್ತವ್ಯವನ್ನು 250 ದಿನಗಳಿಗೆ ಹೆಚ್ಚಿಸಿದರೂ ತಪ್ಪೇನಿಲ್ಲ. ಅವರ ಉಪಸ್ಥಿತಿಯಿಂದ ದೇಶಕ್ಕೆ ಲಾಭವಾಗುತ್ತದೆ. ಇದು ಸ್ಟಾರ್ಟಪ್​ಗಳ ಮೇಲೂ ಪರಿಣಾಮ ಬೀರುತ್ತದೆ" ಎಂದು ನುಡಿದರು.

ಇದನ್ನೂ ಓದಿ: Explained: ಹೊಸ ಹಾಗೂ ಹಳೆಯ ಆದಾಯ ತೆರಿಗೆ ಪದ್ಧತಿ ನಡುವೆ ಇರುವ ವ್ಯತ್ಯಾಸವೇನು..?

ಅನಿವಾಸಿ ಭಾರತೀಯನೆಂದರೆ..?: ಯಾವುದೇ ವ್ಯಕ್ತಿ ಭಾರತೀಯ ಮೂಲದವನಾಗಲು ಆತ ಕನಿಷ್ಠ 240 ದಿನಗಳ ಭಾರತದಲ್ಲಿ ವಾಸಿಸಬೇಕು. ಇಲ್ಲವಾದಲ್ಲಿ ಅವರನ್ನು 'ಎನ್​ಆರ್​ಐ' ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರಕಾರ ಇವರ ಮೂಲ ಪರಿಶೀಲಿಸಿ ಅವರಿಗೆ ಪಿಐಒ ಎಂಬ ಗುರುತಿನ ಚೀಟಿ ನೀಡುತ್ತದೆ. ಈ ಚೀಟಿ ಇದ್ದಲ್ಲಿ ವೀಸಾ ಇಲ್ಲದೇ ಭಾರತಕ್ಕೆ ಪ್ರವೇಶಿಸಬಹುದು. ಉದ್ಯೋಗದ ನಿಮಿತ್ತ ವಿದೇಶಕ್ಕೆ ತೆರಳಿ ಅಲ್ಲಿನ ಸಂಪಾದನೆ ಮತ್ತು ಐಷಾರಾಮಿ ಬದುಕಿಗೆ ಹೊಂದಿಕೊಂಡು ಅನೇಕ ಭಾರತೀಯರು ಅಲ್ಲಿಯೇ ನೆಲೆ ಕಂಡುಕೊಂಡಿದ್ದಾರೆ. ಭಾರತೀಯರನ್ನು ವಿದೇಶಿಗರು ಅಥವಾ ವಿದೇಶಿಗರನ್ನು ಭಾರತೀಯರು ಮದುವೆಯಾದರೂ ಸಹ ಅವರು ಅನಿವಾಸಿ ಭಾರತೀಯರಾಗುತ್ತಾರೆ. NRIಗಳು ವಿವಿಧ ದೇಶಗಳ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಮಹತ್ವದ ಹುದ್ದೆಗಳಲ್ಲಿದ್ದು ಭಾರತದ ಕೀರ್ತಿ ಹೆಚ್ಚಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಭಾರತದ ಅಭಿವೃದ್ಧಿಗೆ ಇವರ ಸಹಾಯಹಸ್ತ, ಕೊಡುಗೆ ಮಹತ್ವದ್ದಾಗಿದೆ.

Last Updated : Feb 5, 2023, 8:59 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.