ETV Bharat / state

ಹುಬ್ಬಳ್ಳಿ ಬಾಂಬ್ ಸ್ಫೋಟ ಪ್ರಕರಣ.. ಮಹಾ ಚುನಾವಣೆಗೂ ಲಿಂಕ್‌ ಇರುವ ಅನುಮಾನ? - ಪ್ರಾದೇಶಿಕ ಪಕ್ಷಕ್ಕೆ ಸೇರಿದ ಓರ್ವ ವ್ಯಕ್ತಿಯ ಹೆಸರು

ಇಂದು ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೂ ಮಹಾರಾಷ್ಟ್ರ ಚುನಾವಣೆಗೂ ‌ಲಿಂಕ್‌ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ.

ಹುಬ್ಬಳ್ಳಿ ಬಾಂಬ್ ಸ್ಫೋಟ
author img

By

Published : Oct 21, 2019, 6:00 PM IST

Updated : Oct 21, 2019, 9:01 PM IST

ಹುಬ್ಬಳ್ಳಿ: ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮಹಾರಾಷ್ಟ್ರ ಚುನಾವಣೆಗೂ ‌ಲಿಂಕ್‌ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ.

ಇಂದು ಮಧ್ಯಾಹ್ನ ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸ್​​ಪ್ರೆಸ್ ರೈಲಿನಲ್ಲಿ 10ಕ್ಕೂ ಹೆಚ್ಚು ಅನುಮಾನಾಸ್ಪದ ಬಾಕ್ಸ್​​ಗಳು ಪತ್ತೆಯಾಗಿದ್ದವು. ಅದರಲ್ಲಿ ಒಂದು ಬಾಕ್ಸ್​​ನನ್ನು ಸಿಆರ್​ಪಿಎಫ್ ಪೇದೆಯೊಬ್ಬರು ಹುಸೇನ್ ಎಂಬ ವ್ಯಕ್ತಿಯಿಂದ ಈ ಬಾಕ್ಸ್​ ತೆರೆಸಿದ್ರು ಎನ್ನಲಾಗಿದೆ. ಆಗ ಬಾಂಬ್ ಸ್ಫೋಟಗೊಂಡು ಯುವಕನ ಕೈ ಛಿದ್ರಗೊಂಡಿದೆ.

ಆದ್ರೆ, ಬಾಕ್ಸ್​​ನನ್ನು ತೆರೆದು‌ ನೋಡಿದಾಗ ಅದರ ಒಳಗಿರುವ ಸ್ಫೋಟಕ‌ ವಸ್ತು ತುಂಬಿದ ಬಕೆಟ್ ಮೇಲೆ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾದೇಶಿಕ ಪಕ್ಷದ ಹೆಸರನ್ನು ಕೆಂಪು ಅಕ್ಷರದಲ್ಲಿ ತಮಿಳು ಹಾಗೂ ಇಂಗ್ಲಿಷ್​​​ ಭಾಷೆಯಲ್ಲಿ ಬರೆಯಲಾಗಿದೆ.

ಬಾಕ್ಸ್​ ಒಳಗೆ ಸ್ಫೋಟಕ ವಸ್ತು ತುಂಬಿದ ಬಕೆಟ್​ ಪತ್ತೆ

ಅಲ್ಲದೆ ಕೊಲ್ಲಾಪುರದ ಪ್ರಾದೇಶಿಕ ಪಕ್ಷಕ್ಕೆ ಸೇರಿದ ಒಬ್ಬ ವ್ಯಕ್ತಿಯ ಹೆಸರು ಕೂಡಾ ಇದೆ. ಹೀಗಾಗಿ ಈ ಸ್ಫೋಟ ಪ್ರಕರಣಕ್ಕೂ ಇಂದು‌ ಮಹಾರಾಷ್ಟ್ರದಲ್ಲಿ ‌ನಡೆದ ಚುನಾವಣೆಗೂ‌ ಲಿಂಕ್‌ ಇರುವ ಶಂಕೆ‌ ವ್ಯಕ್ತವಾಗಿದೆ.

ಸದ್ಯಕ್ಕೆ 10ಕ್ಕೂ ಹೆಚ್ಚು ಬಾಕ್ಸ್​​ಗಳನ್ನು ಬಯಲು ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಇರಿಸಿದ್ದು, ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಬಂದ ಮೇಲೆ ಇದರ ಸತ್ಯಾಸತ್ಯತೆ ತಿಳಿಯಲಿದೆ.

Intro:ಹುಬ್ಬಳ್ಳಿ

ರೈಲು ನಿಲ್ದಾಣದಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣಕ್ಕೂ ಮಹಾರಾಷ್ಟ್ರ ಚುನಾವಣೆಗೂ ‌ಲಿಂಕ್‌ ಇದೆಯಾ ಎಂಬ ಶಂಕೆ ವ್ಯಕ್ತವಾಗಿದೆ.‌ ಇಂದು ಮದ್ಯಾಹ್ನ ವಿಜಯವಾಡ- ಹುಬ್ಬಳ್ಳಿ ಅಮರಾವತಿ ಎಕ್ಸ್ಪ್ರೆಸ್ ರೈಲಿನಲ್ಲಿ 10 ಕ್ಕೂ ಹೆಚ್ಚು ಅನುಮಾನಸ್ಪದವಾದ ಬಾಕ್ಸ್ ಪತ್ತೆಯಾಗಿದ್ದವು. ಅದರಲ್ಲಿನ
ಒಂದು ಬಾಕ್ಸ್ ನ್ನು ಆರ್ ಪಿ ಎಫ್ ಪೇದೆ ರವಿ ಎಂಬುವವರು ಹುಸೇನ್ ಎಂಬುವರಿಂದ ಒಪನ್ ಮಾಡಿಸಿದಾಗ ಬಾಂಬ್ ಸ್ಪೋಟಗೊಂಡು ಯುವಕನ ಕೈ ಛೀದ್ರಗೊಂಡಿದೆ. ಆದ್ರೆ ಬಾಕ್ಸ್ ನ್ನು ತೆರದು‌ ನೋಡಿದಾಗ
ಬಾಕ್ಸ್ ಒಳಗಡೆ ಇರುವ ಸ್ಪೋಟಕ‌ ವಸ್ತು ತುಂಬಿದ ಬಕೆಟ್ ಮೇಲೆ "ನೋ ಬಿಜೆಪಿ, ನೋ‌ ಕಾಂಗ್ರೆಸ್ ಓನ್ಲಿ ಶಿವಸೇನೆ" ಎಂಬ ಕೆಂಪು ಅಕ್ಷದಲ್ಲಿ ಬರೆದ ತಮಿಳು ಹಾಗೂ ಇಂಗ್ಲೀಷ್ ಬಾಷೆಯಲ್ಲಿ ಬರೆಯಲಾಗಿದೆ.
ಅಲ್ಲದೆ ಕೊಲ್ಹಾಪುರದ ಶಿವಸೇನಾ ಅಭ್ಯರ್ಥಿ ಗರಗತಿ ಅವರ ಹೆಸರನ್ನು ಕೂಡ ಇದೆ. ಹೀಗಾಗಿ ಈ ಸ್ಟೋಟ ಪ್ರಕರಣ ಕ್ಕೂ ಇಂದು‌ ಮಹಾರಾಷ್ಟ್ರ ದಲ್ಲಿ ‌ನಡೆದ ಚುನಾವಣೆಗೂ‌ ಲಿಂಕ್‌ ಇರುವ ಶಂಕೆ‌ ವ್ಯಕ್ತವಾಗಿದೆ.
ಸದ್ಯಕ್ಕೆ 10ಕ್ಕೂ ಹೆಚ್ಚು ಬಾಕ್ಸ್ ಗಳನ್ನು ಬಯಲು ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಇರಿಸಿದ್ದು, ಬೆಂಗಳೂರಿನಿಂದ ಆಗಮಿಸುವ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಬಂದ ಮೇಲೆ ಇದರ ಸತ್ಯಾಸತ್ಯತೆ ತಿಳಿಯಲಿದೆ.Body:H B GaddadConclusion:Etv hubli
Last Updated : Oct 21, 2019, 9:01 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.