ಹುಬ್ಬಳ್ಳಿ: ಲಾಕ್‌ಡೌನ್ ಮಾಡಿರುವ ಹಿನ್ನೆಲೆಯಲ್ಲಿ ರಕ್ತದ ಬ್ಯಾಂಕ್ಗಳಲ್ಲಿ ರಕ್ತದ ಕೊರತೆ ಇರುವುದರಿಂದ ತಾಲೂಕಿನ ಸಂಶಿ ಗ್ರಾಮದ ಜಗದ್ಗುರು ಫಕೀರೇಶ್ವರ ಮಠದಲ್ಲಿ ''ಸಂವೃಕ್ಷ'' ಯುವಕರ ಸಂಘಟನೆಯಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನಿಯಮಿತ ರೋಗಿಗಳಿಗೆ ಪ್ರತಿದಿನವೂ ರಕ್ತದ ಅವಶ್ಯಕತೆಯಿತೆ ಇರುವ ಕಾರಣ ರಕ್ತದಾನ ಶಿಬಿರವನ್ನು ಯುವಕರು ಹಮ್ಮಿಕೊಂಡಿದ್ದರು. ತಾಲೂಕು ಪಂಚಾಯತಿ ಸದಸ್ಯರಾದ ಶ್ರೀಮತಿ ಜಗದೀಶ್ ಉಪ್ಪಿನ್ ಅವರ ಬೆಂಬಲದಿಂದ ಗ್ರಾಮದಲ್ಲಿ ಯುವಕರ ಹಾಗೂ ವಯಸ್ಕರು ರಕ್ತದಾನ ಮಾಡಿದರು. ಲಾಕ್ಡೌನ್ನಿಂದ ರೋಗಿಗಳು ರಕ್ತ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಸಂಶಿ ಗ್ರಾಮದ ಯುವಕರು ರಕ್ತದಾನ ಮಾಡುವ ಮೂಲಕ ರೋಗಿಗಳ ಸಮಸ್ಯೆಗೆ ಸ್ಪಂದಿಸಿದ್ದಾರೆ.
ಶಿಬಿರದಲ್ಲಿ ಒಟ್ಟು 80 ಯುನಿಟ್ ಬ್ಲಡ್ ಸಂಗ್ರಹಣೆ ಮಾಡಿದ್ದು, ರಾಷ್ಟ್ರೋತ್ಥಾನ ಬ್ಲಡ್ ಬ್ಯಾಂಕ್ಗೆ ಕಳುಹಿಸಲಾಗುತ್ತದೆ ಎಂದು ಸಂವೃಕ್ಷ ಯುವಕ ಸಂಘಟನೆಯ ಮುಖ್ಯಸ್ಥ ಸುಚಿತ ಅಂಗಡಿ ತಿಳಿಸಿದರು.