ಹುಬ್ಬಳ್ಳಿ: ಪ್ರೇಮಿಗಳ ಖಾಸಗಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಲ್ಲದೇ ಯುವಕನನ್ನು ಥಳಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಗ್ಯಾಂಗ್ ವಿರುದ್ಧ ಹುಬ್ಬಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಯುವಕನೋರ್ವ ತನ್ನ ಪ್ರೇಯಸಿಯೊಂದಿಗೆ ಪಾರ್ಕ್ನಲ್ಲಿದ್ದ ವೇಳೆ, ಅಕ್ಷಯ ಪಾರ್ಕ್ ನಿವಾಸಿಗಳಾದ ಶಕ್ತಿರಾಜ ದಾಂಡೇಲಿ, ಸಂತೋಷ್ ಬ್ಯಾಹಟ್ಟಿ, ರಾಹುಲ ಹಾಗೂ ಪ್ರಭು ಸೇರಿದಂತೆ ಹಲವರು ವಿಡಿಯೋ ಶೂಟ್ ಮಾಡಿದ್ದರು.
ಇದನ್ನೂ ಓದಿ: ಸಾಹುಕಾರ್ ವಿರುದ್ಧ ದಾಖಲಾಗುತ್ತಾ ಎಫ್ಐಅರ್?: ಮತ್ತೆ ಐವರನ್ನು ವಿಚಾರಣೆಗೆ ಕರೆದ ಎಸ್ಐಟಿ
ಬಳಿಕ ಯುವಕನಿಗೆ ಆತನ ಖಾಸಗಿ ಕ್ಷಣದ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ ಹಣ ನೀಡಲು ನಿರಾಕರಿಸಿದ ಕಾರಣ ಯುವಕನನ್ನು ಹಿಗ್ಗಾಮುಗ್ಗ ಥಳಿಸಿದ್ದರು.

ಈ ಸಂಬಂಧ ಹಲ್ಲೆಗೊಳಗಾದ ಯುವಕನ ತಾಯಿ ಹುಬ್ಬಳ್ಳಿಯ ಗೋಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.