ETV Bharat / state

ಪರಿಷತ್ ಚುನಾವಣೆ: ಬಿಜೆಪಿಗೆ ಮಗ್ಗಲು ಮುಳ್ಳಾದ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ​ - ಹಾವೇರಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ್​

ಡಿಸೆಂಬರ್​​ .10 ರಂದು ನಡೆಯಲಿರುವ ವಿಧಾನಪರಿಷತ್ ಚುನಾವಣೆಯಲ್ಲಿ ಹಾವೇರಿ ಜಿಲ್ಲೆಯಲ್ಲಿ ಪ್ರಭಾವಿ ಪಂಚಮಸಾಲಿ ಸಮುದಾಯದ ಬಿಜೆಪಿ ನಾಯಕ ಮಲ್ಲಿಕಾರ್ಜುನ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವುದು ಕಮಲ ಪಡೆಯ ಧುರೀಣರನ್ನು ಕಂಗೆಡುವಂತೆ ಮಾಡಿದೆ.

BJP will facing problem by Independent candidate
ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಅವರಿಂದ ಸಮಸ್ಯೆ ಎದುರಿಸಲಿರುವ ಬಿಜೆಪಿ
author img

By

Published : Dec 4, 2021, 4:50 PM IST

ಹುಬ್ಬಳ್ಳಿ: ವಿಧಾನ ಪರಿಷತ್ ಚುನಾವಣೆ ದಿನದಿಂದ ದಿನಕ್ಕೆ ಕಾವು ಪಡೆದುಕೊಳ್ಳುತ್ತಿದೆ. ಎರಡು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿರುವ ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಬಿಜೆಪಿ- ಕಾಂಗ್ರೆಸ್ ತಲಾ ಓರ್ವ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ರಕ್ಷಣಾತ್ಮಕ ಆಟಕ್ಕೆ ‌ಮೊರೆ ಹೋಗಿದೆ. ಆದರೆ ಕೊನೆ ಗಳಿಗೆಯಲ್ಲಿ ಬಿಜೆಪಿಗೆ ಬಂಡಾಯ ಅಭ್ಯರ್ಥಿ ಮುಳುವಾಗುವ ಆತಂಕ ಎದುರಾಗಿದೆ‌.

ಪರಿಷತ್​ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಿಂದ ಬಿಜೆಪಿ ಎದುರಾದ ಆತಂಕ

ಧಾರವಾಡ, ಹಾವೇರಿ, ಗದಗ ಜಿಲ್ಲೆಯನ್ನು ಒಳಗೊಂಡಂತೆ ಎರಡು ಸ್ಥಾನಗಳಿಗೆ ನಡೆಯುತ್ತಿರುವ ಪರಿಷತ್ ಚುನಾವಣೆ ಅಖಾಡ ರಂಗೇರಿದೆ. ಬಿಜೆಪಿ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳದೇ ಹಾಲಿ ಪರಿಷತ್ ಸದಸ್ಯ ಪ್ರದೀಪ್​ ಶೆಟ್ಟರ್ ಅವರನ್ನು ಮಾತ್ರ ಕಣಕ್ಕಿಳಿಸಿದೆ. ಆರಂಭದಲ್ಲಿ ಬಿಜೆಪಿ ಇಬ್ಬರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ಹೇಳಲಾಗಿತ್ತಾದರೂ ಕಳೆದ ಬಾರಿಯ ಚುನಾವಣೆಯಲ್ಲಿ ಪ್ರದೀಪ್​​​​ ಶೆಟ್ಟರ್ ಗೆದ್ದರೂ ಎರಡನೇ ಸ್ಥಾನದಲ್ಲಿದ್ದರು ಎನ್ನುವ ಕಾರಣಕ್ಕೆ ಇನ್ನೊಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.

ಪ್ರಥಮ ಪ್ರಾಶಸ್ತ್ಯದ ಮತಗಳಿಗೆ ಹಿನ್ನಡೆ ಸಾಧ್ಯತೆ:

ಪ್ರದೀಪ್​​ ಶೆಟ್ಟರ್ ಕಳೆದ ಬಾರಿ 3,400 ರಷ್ಟು ಮತ ಪಡೆದಿದ್ದರು. ಶ್ರೀನಿವಾಸ್​​ ಮಾನೆ 3,700 ಮತಗಳನ್ನು ಪಡೆದು ಮುಂಚೂಣಿಯಲ್ಲಿದ್ದರು. 3,369 ಮತಗಳಿರುವ ಹಾವೇರಿ ಜಿಲ್ಲೆಯಲ್ಲಿ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಂಡಾಯದ ಬಿಸಿ ತಾಗಿಸಿದ್ದು, ಬಿಜೆಪಿ‌ ನಾಯಕರನ್ನು ಚಿಂತೆಗೀಡು ಮಾಡಿದೆ.

ಇನ್ನೇನು ಕಾಂಗ್ರೆಸ್, ಬಿಜೆಪಿ ತಲಾ‌ ಓರ್ವ ಅಭ್ಯರ್ಥಿ ಕಣಕ್ಕಿಳಿದಿರುವುದರಿಂದ ಅನಾಯಾಸವಾಗಿ ಗೆದ್ದು ಬರ್ತಾರೆ ಅಂದುಕೊಳ್ಳಲಾಗಿತ್ತು. ಆದರೆ, ಚುನಾವಣೆ ದಿನಾಂಕ ಹತ್ತಿರ‌ ಬರುತ್ತಿದ್ದಂತೆ ಬಿಜೆಪಿಗೆ ಬಂಡಾಯದ ಬಿಸಿ‌ ಜೋರಾಗಿ ತಟ್ಟಿದೆ. ಬಿಜೆಪಿ ಬಂಡಾಯ ಅಭ್ಯರ್ಥಿಯಿಂದ ಪ್ರಥಮ ಪ್ರಾಶಸ್ತ್ಯದ ಮತಗಳಿಗೆ ಹಿನ್ನಡೆಯಾಗುವ ಸಾಧ್ಯತೆಗಳು ದಟ್ಟವಾಗಿವೆ.

ಕಾಂಗ್ರೆಸ್‍ ಸಹ ಓರ್ಭಭ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರಿಂದ ಬಿಜೆಪಿ ಕಾಂಗ್ರೆಸ್ ತಲಾ ಒಬ್ಬ ಅಭ್ಯರ್ಥಿ ಗೆಲುವು ಸಾಧಿಸಬಹುದು ಅಂತಲೇ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಗೆಲುವಿನ ಹಾದಿ ಸುಗಮವಾಗಬೇಕಾದರೆ ಚಲಾವಣೆಯಾದ ಮತದಾನದಲ್ಲಿ ಶೇ. 50ಕ್ಕಿಂತ ಹೆಚ್ಚು ಮೊದಲು ಪ್ರಾಶಸ್ತ್ಯದ ಮತಗಳನ್ನು ಅಭ್ಯರ್ಥಿಗಳು ಪಡೆಯಬೇಕಿದೆ. ಇಲ್ಲದೇ ಹೋದಲ್ಲಿ ಎರಡನೇ ಪ್ರಾಶಸ್ತ್ಯದ ಮತಗಳನ್ನು ಲೆಕ್ಕಕ್ಕೆ ಹಾಕಬೇಕಾಗುತ್ತದೆ. ಮೇಲ್ನೋಟಕ್ಕೆ ಮೊದಲ ಪ್ರಾಶಸ್ತ್ಯದ ಮತಗಳ ಮೇಲೆಯೇ ಇಬ್ಬರೂ ಅಭ್ಯರ್ಥಿಗಳು ಕಣ್ಣಿಟ್ಟಿದ್ದಾರೆ.

ಹಾವೇರಿಯಲ್ಲಿಯೇ ಮತದಾರರು ಹೆಚ್ಚು:

ಮೂರು ಜಿಲ್ಲೆಗಳನ್ನು ಹೋಲಿಸಿದಾಗ ಹಾವೇರಿ ಜಿಲ್ಲೆಯಲ್ಲಿ 3369, ಧಾರವಾಡದಲ್ಲಿ 2298, ಗದಗ ಜಿಲ್ಲೆಯಲ್ಲಿ 1981 ಮತದಾರರಿದ್ದು, ಒಟ್ಟು 7,663 ಮತದಾರರು ಇಬ್ಬರು ಅಭ್ಯರ್ಥಿಗಳಿಗೆ ತಮ್ಮ ಹಕ್ಕು ಚಲಾಯಿಸಬಹುದು. ಆದರೆ, ಈ ಬಾರಿ ಬಿಜೆಪಿ‌ಗೆ ಬಂಡಾಯದ ಬಿಸಿ ಜೋರಾಗಿ ತಟ್ಟಲಿದೆ. ನಾಮಪತ್ರ ಸಲ್ಲಿಕೆಯ ಅಂತಿಮ ದಿನ ಹುಬ್ಬಳ್ಳಿಯ ಪ್ರತಿಷ್ಠಿತ ಕೆಎಲ್‍ಇ ಸಂಸ್ಥೆಯ ನಿರ್ದೇಶಕ, ಬಿಜೆಪಿ ಧುರೀಣ ಶಂಕರಣ್ಣ ಮುನವಳ್ಳಿ ಬಂಡಾಯವೆದ್ದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಲು ಸಿದ್ಧವಾಗಿದ್ದರು.

ಎಚ್ಚೆತ್ತ ಬಿಜೆಪಿ ವರಿಷ್ಠರು ಅದೆಗೋ ಶಂಕರಣ್ಣ ಮುನವಳ್ಳಿ ಅವರನ್ನು ಸಮಾಧಾನಗೊಳಿಸಿ ನಾಮಪತ್ರ ಸಲ್ಲಿಸದಂತೆ ತಡೆಯುವಲ್ಲಿ ಯಶಸ್ವಿಯಾಗಿತ್ತು. ಆದರೆ, ಅತೀ ಹೆಚ್ಚು ಮತದಾರರನ್ನು ಹೊಂದಿರುವ ಹಾವೇರಿ ಕ್ಷೇತ್ರದ ಹಾವೇರಿ ಎಪಿಎಂಸಿ ಅಧ್ಯಕ್ಷ, ಪ್ರಭಾವಿ ಪಂಚಮಸಾಲಿ ಸಮುದಾಯದ ಬಿಜೆಪಿ ನಾಯಕ ಮಲ್ಲಿಕಾರ್ಜುನ ಹಾವೇರಿ ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿರುವುದು ಕಮಲ ಪಡೆಯ ಧುರೀಣರನ್ನು ಕಂಗೆಡುವಂತೆ ಮಾಡಿದೆ. ಆದರೆ ಕಾಂಗ್ರೆಸ್​​​ನಲ್ಲಿ ಮಾತ್ರ ಯಾವುದೇ ಅಪಸ್ವರವಿಲ್ಲ. ಹೀಗಾಗಿ ಗೆಲುವು ಸುಲಭ ಎಂಬ ವಿಶ್ವಾಸದಲ್ಲಿ ಕಾಂಗ್ರೆಸ್ ಇದೆ.

ಬಿಜೆಪಿ‌ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಲ್ಲಿಕಾರ್ಜುನ ಮೇಲೆ ಶಿಸ್ತು ಕ್ರಮದ ಕಟ್ಟೆಚ್ಚರ ನೀಡುತ್ತು. ಆದರೂ ಮಲ್ಲಿಕಾರ್ಜುನ ಮಾತ್ರ ಕಣದಿಂದ ಹಿಂದೆ ಸರಿದಿಲ್ಲ. ಬಿಜೆಪಿ ಯಾವುದೇ ಕ್ರಮ ತೆಗೆದುಕೊಂಡರೂ ಎದುರಿಸಲು ಸಿದ್ಧನಿದ್ದೇನೆ ಎಂಬ ಮಾಹಿತಿ ರವಾನಿಸಿದ್ದಾರೆ. ಇದು ಪರಿಷತ್ತು ಅಖಾಡ ಮತ್ತಷ್ಟು ರಂಗೇರುವಂತೆ ಮಾಡಿದೆ.

ಇದನ್ನೂ ಓದಿ: 2 ಡೋಸ್ ಕೋವಿಡ್​ ಲಸಿಕೆ ಪಡೆದಿದ್ದರೆ ಮಾತ್ರ ಮಾಲ್​​ಗಳಿಗೆ ಪ್ರವೇಶ: ಇಂದಿನಿಂದಲೇ ಚೆಕ್ಕಿಂಗ್​ ಆರಂಭ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.