ಹುಬ್ಬಳ್ಳಿ: ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಇನ್ಫೋಸಿಸ್ ಮುಖ್ಯಸ್ಥೆ ಸುಧಾಮೂರ್ತಿ ಅವರು ನೀಡಿದ ಆಹಾರ ಪದಾರ್ಥಗಳು ಬಡವರಿಗೆ ನೇರವಾಗಿ ಸೇರುತ್ತಿಲ್ಲ. ಇದರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಎನ್ಸಿಪಿ ರಾಜ್ಯ ಕಾರ್ಯದರ್ಶಿ ಈರಪ್ಪ ಎಮ್ಮಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಜಿಲ್ಲಾಡಳಿತ ವಿತರಿಸಬೇಕಾದ ಆಹಾರ ಕಿಟ್ಗಳನ್ನು ಬಿಜೆಪಿ ಕಾರ್ಯಕರ್ತರು ಹೇಗೆ ವಿತರಿಸಿದರು? ಇದು ಜಿಲ್ಲಾಡಳಿತದ ಗಮನಕ್ಕೆ ಬರಲಿಲ್ಲವೇ? ಸಂಘ ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಕೊಡದೆ ಜಿಲ್ಲಾಡಳಿತಕ್ಕೆ ತಂದು ಕೊಟ್ಟರೆ ಜಿಲ್ಲಾಡಳಿತದಿಂದ ಬಡವರಿಗೆ, ನಿರ್ಗತಿಕರಿಗೆ ತಲುಪಿಸುತ್ತೇವೆ ಎದು ಹೇಳಿತ್ತು. ಆದರೆ, ಆಹಾರ ಪದಾರ್ಥಗಳ ಕಿಟ್ಗಳು ಬಿಜೆಪಿಯರ ಕೈಗೆ ಹೇಗೆ ಸೇರಿದವು ಎಂಬುದು ಸಂಶಯ ಮೂಡಿಸಿದೆ ಎಂದು ಆರೋಪಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ಸರಿಯಾದ ಕ್ರಮ ಜರುಗಿಸಬೇಕು. ಅಲ್ಲದೆ ಈ ಮೋಸ ಜನರಿಗೆ ಅರಿವಾಗಬೇಕು ಎಂದು ಈರಪ್ಪ ಎಮ್ಮಿ ಹೇಳಿದ್ದಾರೆ.