ETV Bharat / state

ಕೋವ್ಯಾಕ್ಸಿನ್ ತ್ಯಾಜ್ಯ ನಿರ್ವಹಣೆಗಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜನೆ - ಕೋವಿಡ್ ಲಸಿಕಾ ವಿತರಣೆ

ಒಂದು ಕೇಂದ್ರದಲ್ಲಿ ಐವರು ಸಿಬ್ಬಂದಿಗೆ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆಯ ತರಬೇತಿ‌ ನೀಡಲಾಗಿದ್ದು,‌ ಜಿಲ್ಲೆಯಲ್ಲಿ ಒಟ್ಟು 350 ಸಿಬ್ಬಂದಿ ತ್ಯಾಜ್ಯ ‌ನಿರ್ವಹಣೆ ಮಾಡಲಿದ್ದಾರೆ..

Bio-Medical Waste Management
ಕೊರೊನಾ ಲಸಿಕೆ ತ್ಯಾಜ್ಯ ನಿರ್ವಹಣೆಗೆ ಹೆಚ್ಚು ಒತ್ತು
author img

By

Published : Jan 17, 2021, 4:40 PM IST

ಹುಬ್ಬಳ್ಳಿ : ಕೊರೊನಾ ವೈರಸ್ ತಡೆಗೆ ಅಗತ್ಯ ಕ್ರಮಗಳನ್ನು ಕೈಗೊಂಡಿರುವ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯು, ಕೋವಿಡ್ ಲಸಿಕಾ ತ್ಯಾಜ್ಯವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಮುಂದಾಗಿದೆ.

ಈಗಾಗಲೇ ಕೋವಿಡ್ ಲಸಿಕಾ ವಿತರಣೆ ಆರಂಭಿಸಲಾಗಿದೆ. ಲಸಿಕೆ ಹಾಕಿದ ನಂತರ ಉತ್ಪತ್ತಿಯಾಗುವ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆಯು ಪ್ರಮುಖ ಸವಾಲಿನ ಕೆಲಸವಾಗಿದೆ.

ಅವುಗಳನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಕೊರೊನಾ ವೈರಸ್ ಹರಡುವ ಭೀತಿ ಇದೆ. ಹೀಗಾಗಿ, ಜಿಲ್ಲಾ ಆರೋಗ್ಯ ಇಲಾಖೆ ಸಾಕಷ್ಟು ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದೆ.

ಕೊರೊನಾ ಲಸಿಕೆ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಒತ್ತು..

ಕೋವಿಡ್ -19 ಲಸಿಕೆ ಸಂಬಂಧಿತ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆಗಾಗಿ, ಆರೋಗ್ಯ ಸಿಬ್ಬಂದಿಗೆ ಸರಿಯಾದ ತರಬೇತಿ ನೀಡಲಾಗಿದೆ.‌ ಮೊದಲ‌ ಹಂತದಲ್ಲಿ ಕೇವಲ 7 ಲಸಿಕಾ ಸೆಂಟರ್​​​ ತೆರೆಯಲಾಗಿದೆ.‌ ಮುಂದೆ ಜಿಲ್ಲೆಯ 70 ಕೇಂದ್ರಗಳಲ್ಲಿ ಲಸಿಕೆ ವಿತರಣೆ ಮಾಡಲಾಗುತ್ತಿದೆ.

ಒಂದು ಕೇಂದ್ರದಲ್ಲಿ ಐವರು ಸಿಬ್ಬಂದಿಗೆ ಬಯೋ ಮೆಡಿಕಲ್ ತ್ಯಾಜ್ಯ ನಿರ್ವಹಣೆಯ ತರಬೇತಿ‌ ನೀಡಲಾಗಿದ್ದು,‌ ಜಿಲ್ಲೆಯಲ್ಲಿ ಒಟ್ಟು 350 ಸಿಬ್ಬಂದಿ ತ್ಯಾಜ್ಯ ‌ನಿರ್ವಹಣೆ ಮಾಡಲಿದ್ದಾರೆ.

ಓದಿ: ಬದುಕು ನುಂಗಿದ ಸಂಕ್ರಮಣ ಪ್ರಯಾಣ: ಬಾಲ್ಯ ಸ್ನೇಹಿತೆಯರ ಬದುಕು ಕಸಿದುಕೊಂಡ ಗೋವಾ ತೀರ ಯಾನ!

ಅದರಲ್ಲೂ ಲಸಿಕೆ ಹಾಕಿದ ನಂತರ ಉತ್ಪತ್ತಿಯಾಗುವ ಸೀರಿಂಜ್, ರ್ಯಾಪರ್, ಬಾಟಲ್​​ಗಳನ್ನು ವಿಂಗಡಣೆ ಮಾಡಬೇಕಾಗುತ್ತದೆ. ಇದಕ್ಕಾಗಿ ಕೆಂಪು, ಹಳದಿ ಹಾಗೂ ‌ಕಪ್ಪು ಬಣ್ಣದ ಮೂರು ಪ್ರತ್ಯೇಕ ಡಬ್ಬಾಗಳಲ್ಲಿ ಸಂಗ್ರಹಿಸುವ ಬಗ್ಗೆ ಆರೋಗ್ಯ ಸಿಬ್ಬಂದಿಗೆ ‌ತರಬೇತಿ‌ ನೀಡಲಾಗಿದ್ದು, ಆರೋಗ್ಯ ಸಿಬ್ಬಂದಿ ಪ್ರತ್ಯೇಕಿಸಿದ ತ್ಯಾಜ್ಯವನ್ನು, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರಿಸಲಾಗುತ್ತದೆ.

ಬಳಿಕ ಕಾಮನ್ ಟ್ರೀಟ್​​​ಮೆಂಟ್ ಸ್ಪೆಷಲಿಟಿ ಸಿಬ್ಬಂದಿಯು, ಸಂಗ್ರಹಿಸಿದ ತ್ಯಾಜ್ಯವನ್ನು ತೆಗೆದುಕೊಂಡು ಹೋಗಿ ರೀಸೈಕಲ್ ಮಾಡಿ ನಂತರ ಮತ್ತೆ ಪುನರ್ಬಳಕೆ ಮಾಡಲಾಗುತ್ತದೆ. ಇದರಿಂದ ಮತ್ತೊಮ್ಮೆ ಸೋಂಕು ಹರಡುವುದನ್ನು ತಡೆಯಬಹುದು ಹಾಗೂ ಬಯೋ ಮೆಡಿಕಲ್ ತ್ಯಾಜ್ಯಗಳನ್ನು ಸರಿಯಾದ ನಿರ್ವಹಣೆ ಮಾಡಿ ಪುನರ್ಬಳಕೆ ಮಾಡಬಹುದು. ಇದರಿಂದ ವೈದ್ಯಕೀಯ ಕ್ಷೇತ್ರಕ್ಕಾಗುವ ಆರ್ಥಿಕ ನಷ್ಟ ತಗ್ಗಿಸಬಹುದು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.