ETV Bharat / state

ಸಿಸಿಟಿವಿ ವರ್ಕ್ ಆಗ್ತಿಲ್ಲ, ಪೊಲೀಸ್ ಬೀಟ್ ಕಾಣಸ್ತಿಲ್ಲ: ಹುಬ್ಬಳ್ಳ್ಯಾಗ ಹೆಚ್ಚಾಗೈತಿ ಬೈಕ್ ಕಳ್ಳತನ

ಕಳೆದ ಮೂರು ವರ್ಷಗಳಲ್ಲಿ ಅವಳಿ ನಗರದಲ್ಲಿ ಬೈಕ್ ಕಳ್ಳತನ ಸಂಖ್ಯೆ ಹೆಚ್ಚುತ್ತಲೇ ಇದೆ. 2018ರಲ್ಲಿ ಒಟ್ಟು 177 ಕೇಸ್ ದಾಖಲಾಗಿದ್ದವು. 2019ರಲ್ಲಿ ಇದರ ಸಂಖ್ಯೆ ಜಾಸ್ತಿಯಾಗಿ 239ಕ್ಕೆ ಏರಿತ್ತು. 2020ರಲ್ಲಿ 226 ಬೈಕ್ ಕಳ್ಳತನವಾಗಿವೆ. ಇದರಲ್ಲಿ ಕೆಲವು ವಾಪಸ್ ಪೊಲೀಸರ ಕೈಗೆ ಸಿಕ್ಕರೇ, ಇನ್ನುಳಿದವು ಪತ್ತೆಯಾಗಿಲ್ಲ..

hubli
ಹುಬ್ಬಳ್ಳಿ
author img

By

Published : Jan 17, 2022, 12:29 PM IST

ಹುಬ್ಬಳ್ಳಿ : ಅವಳಿ ನಗರ ಬೆಳೆದಂತೆ ಇಲ್ಲಿನ ಕ್ರೈಂ ಚಟುವಟಿಕೆ ಕೂಡ ಹೆಚ್ಚಾಗ್ತಿವೆ. ಅದರಲ್ಲಿಯೂ ಇತ್ತೀಚೆಗೆ ಇಲ್ಲಿ ಬೈಕ್ ಕಳ್ಳತನ ಹೆಚ್ಚಾಗುತ್ತಿವೆ. ರಾತ್ರಿ ಮನೆ ಮುಂದೆ ನಿಲ್ಲಿಸಿದ ಬೈಕ್​​ಗಳಿಂದ ಹಿಡಿದು ಜನನಿಬಿಡ ಪ್ರದೇಶಗಳ ಪಾರ್ಕಿಂಗ್ ಸ್ಥಳಗಳಲ್ಲಿ ಕಳ್ಳರು ಕೈಚಳಕ ತೋರಿಸುತ್ತಿದ್ದಾರೆ.

ಹೆಚ್ಚಿದ ಬೈಕ್ ಕಳ್ಳತನ ಪ್ರಕರಣಗಳು.. ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಿಸಲು ಸಾರ್ವಜನಿಕರ ಆಗ್ರಹ..

ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಿ ಕೆಲಸ ಮುಗಿಸಿಕೊಂಡು ಬರುವಷ್ಟರಲ್ಲಿ ಬೈಕ್ ಕಣ್ಮರೆಯಾಗಿರುತ್ತದೆ. ಅದರಲ್ಲಿಯೂ ಗ್ರಾಮೀಣ ಪ್ರದೇಶಗಳ ಜನ ಹುಬ್ಬಳ್ಳಿ ನಗರಕ್ಕೆ ಬೈಕ್ ತೆಗೆದುಕೊಂಡು ಬರಲು ಹೆದರುತ್ತಿದ್ದಾರೆ. ಇದಕೆಲ್ಲ ಕಾರಣ ನಗರದಲ್ಲಿ ಕೆಟ್ಟು ನಿಂತಿರುವ ಸಿಸಿಟಿವಿಗಳು ಮತ್ತು ಸರಿಯಾದ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲದಿರುವುದು ಅಂತಾರೆ ಸ್ಥಳೀಯರು.

ಕಳೆದ ಮೂರು ವರ್ಷಗಳಲ್ಲಿ ಅವಳಿ ನಗರದಲ್ಲಿ ಬೈಕ್ ಕಳ್ಳತನ ಸಂಖ್ಯೆ ಹೆಚ್ಚುತ್ತಲೇ ಇದೆ. 2018ರಲ್ಲಿ ಒಟ್ಟು 177 ಕೇಸ್ ದಾಖಲಾಗಿದ್ದವು. 2019ರಲ್ಲಿ ಇದರ ಸಂಖ್ಯೆ ಜಾಸ್ತಿಯಾಗಿ 239ಕ್ಕೆ ಏರಿತ್ತು. 2020ರಲ್ಲಿ 226 ಬೈಕ್ ಕಳ್ಳತನವಾಗಿವೆ. ಇದರಲ್ಲಿ ಕೆಲವು ವಾಪಸ್ ಪೊಲೀಸರ ಕೈಗೆ ಸಿಕ್ಕರೇ, ಇನ್ನುಳಿದವು ಪತ್ತೆಯಾಗಿಲ್ಲ.

ಕದ್ದ ಬೈಕ್​​​ಗಳನ್ನು ಖದೀಮರು ಗುಜರಿಗೆ ಹಾಕಲು ಶುರು ಮಾಡಿದ್ದಾರೆ. ದೊಡ್ಡ ಗ್ಯಾಂಗ್ ಈ ಕಳ್ಳತನದ ಹಿಂದೆ ಕೆಲಸ ಮಾಡ್ತಿದೆ ಎಂಬ ಅನುಮಾನ ಮೂಡಿದೆ. ಕಳೆದ ಕೆಲ ತಿಂಗಳ ಹಿಂದೆ ವಿದ್ಯಾನಗರ ಪೊಲೀಸರು 25 ಬೈಕ್‌ಗಳನ್ನು ಪತ್ತೆ ಹಚ್ಚಿದ್ದು ಬಿಟ್ಟರೆ, ಮತ್ತೆ ಉಳಿದವುಗಳ ಸುಳಿವೇ ಇಲ್ಲ. ಆದರೂ ನಾವು ಇದೆಲ್ಲವನ್ನೂ ನಿಯಂತ್ರಣಕ್ಕೆ ತರುತ್ತೇವೆ ಅಂತಾರೆ ಹು-ಧಾ ಪೊಲೀಸ್ ಆಯುಕ್ತ ಲಾಬೂರಾಮ್.

ಸದ್ಯ ಅವಳಿ ನಗರದ ಎಲ್ಲ ಠಾಣೆಗಳಲ್ಲಿ ಬೈಕ್​​ ಕಳ್ಳತನ ಪ್ರಕರಣ ಬಾಕಿ ಇವೆ. ಕೊರೊನಾ ಕಾರಣಕ್ಕೆ ಕೆಲವು ಕಡೆ ಪತ್ತೆ ಮಾಡಲು ಸಾಧ್ಯವಾಗಿಲ್ಲ. ಇನ್ನಾದರೂ, ಸಿಸಿಟಿವಿ ಸರಿಪಡಿಸಿ ಜತೆಗೆ ಪೊಲೀಸ್ ಬೀಟ್ ವ್ಯವಸ್ಥೆ ಹೆಚ್ಚಿಸಲಿ ಅಂತಾರೆ ಹುಬ್ಬಳ್ಳಿ ಮಂದಿ.

ಇದನ್ನೂ ಓದಿ: Watch... ವ್ಹಿಲೀಂಗ್ ಮಾಡಿ ಲಾಂಗ್ ಹಿಡಿದುಕೊಂಡು ಕ್ಯಾಮೆರಾಗೆ ಪೋಸ್.. ಆರೋಪಿ ಸೆರೆಗೆ ಖಾಕಿ ತೀವ್ರ ಶೋಧ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.