ETV Bharat / state

ಅಂಚಟಗೇರಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.. ಹೆಂಡತಿ ಪ್ರಿಯಕರನಿಂದಲೇ ಗಂಡನ ಕೊಲೆ!! - Jagadeesh Kollapura murder suspect found

ಕೊಲೆಯಾದ ಜಗದೀಶನ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಕಾಶಪ್ಪ. ಜಗದೀಶ್ ಗ್ರಾಮಕ್ಕೆ ಬಂದಾಗ ಆತನನ್ನು ಊರ ಹೊರಗೆ ಕರೆದೊಯ್ದು ಮದ್ಯ ಕುಡಿಸಿ, ನಶೆ ಏರಿದ ಬಳಿಕ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ..

big-twist-to-anchagagare-murder-case
ಕೊಲೆ ಮಾಡಲು ಬಳಸಿದ್ದ ಕಲ್ಲು ಲಭಿಸಿದೆ
author img

By

Published : Nov 25, 2020, 5:38 PM IST

Updated : Nov 26, 2020, 1:37 PM IST

ಹುಬ್ಬಳ್ಳಿ: ಪತ್ನಿ ಹಾಗೂ ಮಗುವನ್ನು ನೋಡಲು ಬಂದು ಬೀದಿ ಹೆಣವಾಗಿದ್ದ ವ್ಯಕ್ತಿಯ ಕೊಲೆಗೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣ ನಡೆದ 24 ಗಂಟೆಗಳಲ್ಲಿಯೇ ಆರೋಪಿ ಬಂಧಿಸುವಲ್ಲಿ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಅದರಗುಂಚಿ ಗ್ರಾಮದ ಕಾಶಪ್ಪ ನಿಂಗಪ್ಪ ತಿಪ್ಪಣ್ಣನವರ ಎಂಬಾತ ಬಂಧಿತ ಆರೋಪಿ. ಈತ ಕೊಲೆಯಾದವನ ಹೆಂಡತಿಯ ಪ್ರಿಯಕರನಾಗಿದ್ದಾನೆ.

ಕೊಲೆ ಮಾಡಲು ಬಳಸಿದ್ದ ಕಲ್ಲು ಲಭಿಸಿದೆ

ಇದನ್ನೂ ಓದಿ: ಪತ್ನಿಯನ್ನು ನೋಡಲು ಬಂದ ಪತಿಯ ಬರ್ಬರ ಹತ್ಯೆ: ಕಾರಣ ನಿಗೂಢ!

ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದ ಜಗದೀಶ ಕೊಲ್ಲಾಪುರ ಎಂಬ ವ್ಯಕ್ತಿಯ ಶವ, ಮಾವನ ಊರಾದ ಅಂಚಟಗೇರಿ ಬಳಿಯ ಚೆನ್ನಾಪುರ ರಸ್ತೆಯಲ್ಲಿ ಸಿಕ್ಕಿತ್ತು. ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದರ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದರು.

ಕೊಲೆಯಾದ ಜಗದೀಶನ ಹೆಂಡತಿ ಜೊತೆಗೆ ಅಕ್ರಮ ಸಂಬಂಧ ಹೊಂದಿದ್ದ ಕಾಶಪ್ಪ. ಜಗದೀಶ್ ಗ್ರಾಮಕ್ಕೆ ಬಂದಾಗ ಆತನನ್ನು ಊರ ಹೊರಗೆ ಕರೆದೊಯ್ದು ಮದ್ಯ ಕುಡಿಸಿ, ನಶೆ ಏರಿದ ಬಳಿಕ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದ. ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸ್​ ಇನ್ಸ್​ಪೆಕ್ಟರ್​​ ರಮೇಶ್ ಗೋಕಾಕ್​​ ನೇತೃತ್ವದಲ್ಲಿ ಆರೋಪಿಯನ್ನ 12 ಗಂಟೆಯೊಳಗೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Last Updated : Nov 26, 2020, 1:37 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.