ETV Bharat / state

ಅವಳಿ ನಗರದಲ್ಲಿ 14‌ ಸಾವಿರ ಕೋಟಿ ಬಂಡವಾಳ ಹೂಡಿಕೆಗೆ ಅನುಮೋದನೆ; ಸಚಿವ ಜಗದೀಶ್ ಶೆಟ್ಟರ್​​

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸ್ಮಾರ್ಟ್ ‌ಸಿಟಿ, ಮಹಾತ್ಮಾ ಗಾಂಧಿ ನಗರ ವಿಕಾಸ್​, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ.

Bhoomi pooje for various development works
ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ಭೂಮಿ ಪೂಜೆ
author img

By

Published : Dec 26, 2020, 1:35 AM IST

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಲಾಗಿದೆ. ವಿವಿಧ ಕೈಗಾರಿಕೋದ್ಯಮಿಗಳು ಅವಳಿ ನಗರದಲ್ಲಿ14 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿದ್ದಾರೆ. ಈ ಹೂಡಿಕೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್​ ಶೆಟ್ಟರ್ ಹೇಳಿದರು.

ವಾರ್ಡ್​ ನಂ. 40ರ ಬಸವ ನಗರ, ಸಹಸ್ರಾರ್ಜುನ ನಗರ, ಕೋಟಿಲಿಂಗ ನಗರ, ನಾಗಲಿಂಗನ ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸ್ಮಾರ್ಟ್ ‌ಸಿಟಿ, ಮಹಾತ್ಮಾ ಗಾಂಧಿ ನಗರ ವಿಕಾಸ್​, ಲೋಕೋಪಯೋಗಿ ಇಲಾಖೆ ಸೇರಿದಂತೆ ಹಲವು ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಸಹಸ್ರಾರ್ಜುನ ನಗರದಲ್ಲಿ 20 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ನಿರ್ಮಿಸಲಾಗುವುದು. 11.30 ಲಕ್ಷ ವೆಚ್ಚದಲ್ಲಿ ನಾಗಲಿಂಗನರ ಹಾಗೂ ಬಸವನಗರದ ಉದ್ಯಾನವನಗಳ ಅಭಿವೃದ್ಧಿ ಚಾಲನೆ ನೀಡಲಾಗಿದೆ. 15 ನೇ ಹಣಕಾಸು ಯೋಜನೆಯ 37 ಲಕ್ಷ ವೆಚ್ಚದಲ್ಲಿ ಬಸವ ನಗರ, ಕೋಟಿಲಿಂಗ ನಗರ, ಪಾವಸ್ಕರ್​​ ಲೇಔಟ್​ನಲ್ಲಿ ಒಳಚರಂಡಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭಾಗವಹಿಸಿದ್ದರು. ವೆಂಕಟೇಶ್ ಕಾಲೋನಿ, ಬಸವನಗರದ ನಿವಾಸಿಗಳು ರಸ್ತೆ ನಿರ್ಮಾಣಕ್ಕಾಗಿ ಇದೇ ವೇಳೆ ಸಚಿವರಿಗೆ ಮನವಿ ಸಲ್ಲಿಸಿದರು. ಮುಖಂಡರಾದ ಮಲ್ಲಿಕಾರ್ಜುನ ಸವಕಾರ, ಸಂತೋಷ್ ಚವ್ಹಾಣ್, ಮುಕುಂದ ಗುಗ್ಗರಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.