ಧಾರವಾಡ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಹೊಸ ಯಲ್ಲಾಪುರ ಹತ್ತಿರದ ಘನತ್ಯಾಜ್ಯ ಘಟಕದಲ್ಲಿ ಬೆಂಕಿ ಹಚ್ಚುವುದರಿಂದ ತೊಂದ್ರೆಯಾಗುತ್ತಿದೆ ಎಂದು ಸ್ಥಳೀಯ ವ್ಯಕ್ತಿಯೋರ್ವ ಕೈಗೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಶಾಸಕ ಅರವಿಂದ ಬೆಲ್ಲದ ಅಂತ್ಯಗೊಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಎದುರು ಸಂತೋಷ ನಂದೂರ ಎಂಬ ವ್ಯಕ್ತಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ವಿಷಯ ತಿಳಿದು ಸ್ಥಳಕ್ಕೆ ಬಂದ ಶಾಸಕ ಅರವಿಂದ ಬೆಲ್ಲದ, ಎಳನೀರು ಕುಡಿಸುವ ಮೂಲಕ ಅಂತ್ಯಗೊಳಿಸಿದರು.
ಹುಬ್ಬಳ್ಳಿ-ಧಾವಾಡ ಮಹಾನಗರ ಪಾಲಿಕೆ ವತಿಯಿಂದ ಸಂಗ್ರಹ ಮಾಡುವ ಕಸವನ್ನು ಅಲ್ಲಿ ಹೋಗಿ ಬಿಡಲಾಗುತ್ತದೆ. ಘನತ್ಯಾಜ್ಯ ವಸ್ತುಗಳಿಗೆ ನಿರಂತರವಾಗಿ ಬೆಂಕಿ ಹಚ್ಚಿ ಬರುವ ಹೊಗೆಯಿಂದ ಸುತ್ತಮುತ್ತಲಿನ ಜನರಿಗೆ ತೊಂದ್ರೆಯಾಗಿತ್ತಿದೆ ಎಂದು ಆರೋಪಿಸಿ ಸಂತೋಷ ನಂದೂರ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ. ಇಂದು ಶಾಸಕ ಅರವಿಂದ ಬೆಲ್ಲದ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಉಪವಾಸ ಕೂತ ಸ್ಥಳಕ್ಕೆ ಭೇಟಿ ನೀಡಿ ಮನವೊಲಿಸಿ ಸತ್ಯಾಗ್ರಹ ಕೈಬಿಡುವಂತೆ ಮನವಿ ಮಾಡಿಕೊಂಡರು. ಬಳಿಕ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲಾಯಿತು.