ETV Bharat / state

ಜೋಶಿ ಸಮ್ಮುಖದಲ್ಲಿ ದೇಸಾಯಿ - ಕೊರವರ ಸಂಧಾನ ಯಶಸ್ವಿ : ಮತ್ತೆ ಒಂದಾದ ಗೆಳೆಯರು

ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮನೆಗೆ ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಭೇಟಿ ನೀಡಿ ಸಂಧಾನ ಮಾತುಕತೆ ನಡೆಸಿದರು. ಈ ಮೂಲಕ ಬಸವರಾಜ ಕೊರವರ ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ.

basavaraja-koravara-has-withdrawn-his-nomination
ಜೋಶಿ ಸಮ್ಮುಖದಲ್ಲಿ ದೇಸಾಯಿ - ಕೊರವರ ಸಂಧಾನ ಯಶಸ್ವಿ : ಮತ್ತೆ ಒಂದಾದ ಗೆಳೆಯರು
author img

By

Published : Apr 24, 2023, 5:29 PM IST

ಧಾರವಾಡ : ಧಾರವಾಡ ಗ್ರಾಮೀಣ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಅವರು ತಮ್ಮ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಬಸವರಾಜ ಕೊರವರ ಮನೆಗೆ ಇಂದು ಕೇಂದ್ರ ಸಚಿವ ಪ್ರಹ್ಲಾದ್​​ ಜೋಶಿ ಭೇಟಿ ನೀಡಿ ಶಾಸಕ ಅಮೃತ್ ದೇಸಾಯಿ ಹಾಗೂ ಕೊರವರ ನಡುವೆ ಸಂಧಾನ ಮಾತುಕತೆ ನಡೆಸಿದರು.

ಕಳೆದ ಚುನಾವಣೆಯಲ್ಲಿ ಬಸವರಾಜ ಕೊರವರ ಶಾಸಕ ಅಮೃತ ದೇಸಾಯಿ ಪರವಾಗಿ ಕೆಲಸ ಮಾಡಿದ್ದರು. ಆದರೆ ಈ ಬಾರಿ ಶಾಸಕರೊಂದಿಗೆ ಮನಸ್ತಾಪ ಉಂಟಾಗಿ ದೂರ ಉಳಿದಿದ್ದರು. ಈ ಹಿನ್ನೆಲೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಇದೀಗ ಬಸವರಾಜ್ ಕೊರವರ ಅವರನ್ನು ಸಚಿವ ಪ್ರಹ್ಲಾದ್​​ ಜೋಶಿ ಭೇಟಿ ಮಾಡಿ ಇಬ್ಬರ ನಡುವೆ ಸಂಧಾನ ಮಾಡಿಸಿದ್ದಾರೆ.

ಸಂಧಾನ ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪ್ರಹ್ಲಾದ್​ ಜೋಶಿ, ಸಾಮಾಜಿಕ ಹೋರಾಟಗಾರರಾದ ಬಸವರಾಜ ಕೊರವರ ಅವರು ತಮ್ಮ ನಾಮಪತ್ರ ಹಿಂಪಡೆಯುತ್ತಾರೆ. ಅವರು ಈ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಅಮೃತ ದೇಸಾಯಿಯವರನ್ನು ಬೆಂಬಲಿಸಲಿದ್ದಾರೆ. ಅವರಿಬ್ಬರೂ ಹಳೆಯ ಸ್ನೇಹಿತರು. ಇಬ್ಬರ ನಡುವೆ ಏನೋ ಸ್ವಲ್ಪ ಮನಸ್ತಾಪ ಉಂಟಾಗಿತ್ತು. ಅದೆಲ್ಲವೂ ಈಗ ನಿವಾರಣೆಯಾಗಿದೆ. ಯಾವುದೇ ಷರತ್ತುಗಳಿಲ್ಲದೇ ನಾಮಪತ್ರ ವಾಪಸ್​​ ಪಡೆಯುತ್ತಿದ್ದಾರೆ ಎಂದರು.

ಸಾಮಾಜಿಕ ಹೋರಾಟಗಾರ ಬಸವರಾಜ ಕೊರವರ ಮಾತನಾಡಿ, ಅಮೃತ ದೇಸಾಯಿ ಹಾಗೂ ನನ್ನ ನಡುವೆ ಕೆಲವೊಂದು ವಿಷಯಕ್ಕೆ ಮನಸ್ತಾಪ ಉಂಟಾಗಿತ್ತು. ಹೀಗಾಗಿ ಅವರಿಂದ ಸ್ವಲ್ಪ ದೂರ ಉಳಿದಿದ್ದೆ. ನಾನು ಹಿಂದೆ ಬಿಜೆಪಿ ಪಕ್ಷದ ಬೆಂಬಲಿಗನಾಗಿದ್ದೆ. ಮುಂದೆಯೂ ಬಿಜೆಪಿಗೆ ಬೆಂಬಲಿಗನಾಗಿರುತ್ತೇನೆ. ಹಿಂದೆ ನಮ್ಮ ಬೆಂಬಲಿಗರು ಮತ್ತು ಹಿರಿಯರು ಪಕ್ಷೇತರರಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದರು. ಇದೀಗ ಅವರೇ ನಾಮಪತ್ರವನ್ನು ವಾಪಸ್​ ಪಡೆಯುವಂತೆ ಹೇಳಿದ್ದಾರೆ. ಹಿರಿಯ ನಾಯಕರು ಹೇಳಿದಂತೆ ನನ್ನ ನಾಮಪತ್ರವನ್ನು ನಾನು ಹಿಂಪಡೆಯುತ್ತೇನೆ ಎಂದು ಕೊರವರ ಹೇಳಿದ್ರು.

ಇನ್ನು ನಾನು ಯಾವುದೇ ಪಕ್ಷವನ್ನು ಸೇರ್ಪಡೆಯಾಗುತ್ತಿಲ್ಲ. ನಾನು ಬಿಜೆಪಿ ಪಕ್ಷದ ಕಾರ್ಯಕರ್ತ ಅಲ್ಲ. ನಾನು ಬಿಜೆಪಿ ಪಕ್ಷದ ಬೆಂಬಲಿಗನಾಗಿದ್ದೇನೆ. ಬೆಂಬಲಿಗನಾಗಿಯೇ ಪಕ್ಷದ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಅಮೃತ ದೇಸಾಯಿ ಮಾತನಾಡಿ, ನಾನು ಹಾಗೂ ಬಸವರಾಜ್​ ಕೊರವರ ಮೊದಲಿನಿಂದಲೂ ಒಳ್ಳೆಯ ಗೆಳೆಯರು. ಅಣ್ಣ ತಮ್ಮಂದಿರಂತೆ ನಡೆದುಕೊಂಡಿದ್ದೇವೆ. 2013ರಲ್ಲಿ ನಾನು ಜೆಡಿಎಸ್​ನಿಂದ ಸೋತಾಗ ಕೊರವರ ಕಣ್ಣೀರು ಹಾಕಿದ್ದರು. 2018 ರಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾಗ ನನ್ನ ಗೆಲುವಿಗೆ ಶ್ರಮಿಸಿದ್ದರು. ಅಣ್ಣ ತಮ್ಮಂದಿರ ನಡುವೆ ಜಗಳ ನಡೆಯುವುದು ಸಾಮಾನ್ಯ. ಈಗಾಗಲೇ ನಾವು ಮತ್ತೆ ಒಂದಾಗಿದ್ದೇವೆ. ಮತ್ತೆ ನಮ್ಮ ಮನೆ ಗಟ್ಟಿಯಾಗಿದೆ ಎಂದು ಪ್ರತಿಕ್ರಿಯಿಸಿದರು.

ತವನಪ್ಪ ಅಷ್ಟಗಿ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿದ ಅವರು, ಅವರು ಮೂಲ ಕಾಂಗ್ರೆಸ್ಸಿಗರು. ಇಲ್ಲಿ ಸಮಾಧಾನ ಆಗಲ್ಲ ಅನಿಸುತ್ತದೆ. ಅದಕ್ಕೆ ವಾಪಸ್ ಹೋಗಿದ್ದಾರೆ. ಅದರ ಬಗ್ಗೆ ನಾವು ಮಾತಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

ಇದನ್ನೂ ಓದಿ : ಅಮಿತ್ ಶಾ ನನ್ನ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು : ಎಸ್ ಎ ರಾಮದಾಸ್‌

ETV Bharat Logo

Copyright © 2024 Ushodaya Enterprises Pvt. Ltd., All Rights Reserved.