ETV Bharat / state

ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣ: ಬಸವರಾಜ ಬೊಮ್ಮಾಯಿ - Basavaraja Bommai

ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಸಮಾಧಾನ ಹೊರಹಾಕಿದ್ದಾರೆ.

Basavaraja Bommai
ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
author img

By ETV Bharat Karnataka Team

Published : Jan 7, 2024, 2:18 PM IST

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

ಹುಬ್ಬಳ್ಳಿ: "ಇದು ದಬ್ಬಾಳಿಕೆಯ ಸರ್ಕಾರ. ಮುಖ್ಯಮಂತ್ರಿಗಳು, ಮಂತ್ರಿಗಳ ಭಾಷೆಯಿಂದ ವ್ಯಕ್ತಿ ಸ್ವಾತಂತ್ರ್ಯಕ್ಕೆ ಈ ರಾಜ್ಯದಲ್ಲಿ ಬೆಲೆ ಇಲ್ಲದಂತಾಗಿದೆ. ಪ್ರಜಾಪ್ರಭುತ್ವಕ್ಕೂ ಬೆಲೆ ಇಲ್ಲದಂತೆ ಮಾಡಿದೆ" ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟೀಕಿಸಿದರು. ನಗರದ ತಮ್ಮ ನಿವಾಸದಲ್ಲಿಂದು ಮಾತನಾಡಿದ ಅವರು, "ಅನ್ಯಾಯದ ವಿರುದ್ಧ ಹೋರಾಟ ಮಾಡಿದ್ರೆ ಕೇಸ್ ಹಾಕುತ್ತಾರೆ. ರಾಜ್ಯದಲ್ಲಿ ಅಘೋಷಿತ ಎಮರ್ಜೆನ್ಸಿ ವಾತಾವರಣವಿದೆ. ಕರ್ನಾಟಕದಲ್ಲಿ ಭಯ ಹುಟ್ಟಿಸೋ ಪ್ರಯತ್ನ ನಡೆಯುತ್ತಿದೆ. ಅದರಲ್ಲಿ ಶ್ರೀಕಾಂತ್ ಪೂಜಾರಿ ಕೇಸ್ ಕೂಡ ಒಂದು. ಯಾವುದೇ ಕೇಸ್ ಇಲ್ಲ ಅಂದ್ರೂ ಒಳಗೆ ಹಾಕಿದ್ರು. ಇದು ಎಮರ್ಜೆನ್ಸಿಯಲ್ಲಿ ಮಾತ್ರ ಸಾಧ್ಯ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ: "ಅವರನ್ನು ಒಳಗಡೆ ಹಾಕಿದ ಅಧಿಕಾರಿ, ಮಂತ್ರಿಗಳು ಕ್ಷಮೆ ಕೇಳಲಿಲ್ಲ. ಜನರು ಇದನ್ನು ಗಮನಿಸುತ್ತಿದ್ದಾರೆ. ಸರ್ಕಾರ ಬಂದ ಏಳೇ ತಿಂಗಳಲ್ಲಿ ಅಧಿಕಾರದ ಮದ ಏರಿದೆ. ಸರ್ಕಾರದ ದಾಷ್ಟ್ಯ ಹೆಚ್ಚಾಗಿದೆ. ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡುತ್ತೇವೆ. ನಾಳೆ ಚಿಂತನ ಮಂಥನ ಸಭೆ ಇದೆ. ಅಲ್ಲಿ ಹೋರಾಟದ ಬಗ್ಗೆ ಚರ್ಚೆ ನಡೆಸುತ್ತೇವೆ" ಎಂದು ತಿಳಿಸಿದರು.

ಕಾಂಗ್ರೆಸ್​​ಗೆ ರಾಮಮಂದಿರ ವಿಚಾರ ಜೀರ್ಣಿಸಿಕೊಳ್ಳಲಾಗ್ತಿಲ್ಲ: ಕಾಂಗ್ರೆಸ್​​ಗೆ ರಾಮಮಂದಿರ ನಿರ್ಮಾಣ ಆಗಬಾರದು ಅನ್ನೋ ಆಸೆ ಇತ್ತು. ಇದಕ್ಕಾಗಿ 30 ವರ್ಷಗಳಿಂದ ಸತತ ಪ್ರಯತ್ನ ನಡೆಸಿಕೊಂಡು ಬಂದಿದ್ದಾರೆ. ಇಂದು ಭಾರತೀಯರ ಕನಸು ನನಸಾಗ್ತಿದ್ರೆ, ಕಾಂಗ್ರೆಸ್​ ಕನಸು ಭಗ್ನವಾಗುತ್ತಿದೆ. ರಾಮಮಂದಿರ ನಿರ್ಮಾಣವಾಗುತ್ತಿರೋದನ್ನು ಅವರಿಗೆ ಜೀರ್ಣಿಸಿಕೊಳ್ಳಲು ಆಗ್ತಿಲ್ಲ. ಇಲ್ಲಿ ಮಾತ್ರವಲ್ಲ, ಅವರ ಆಡಳಿತವಿರುವ ಎಲ್ಲಾ ರಾಜ್ಯಗಳಲ್ಲೂ ದುರ್ಘಟನೆಗಳು ಸಂಭವಿಸುತ್ತಿದೆ. ಆದರೆ ಎಲ್ಲವೂ ಉತ್ತಮವಾಗಿ ನಡೆಯಲಿದೆ. ಭಕ್ತರ ಅಭಿಲಾಶೆ ಇದ್ದಲ್ಲಿ ದೇವರಿರುತ್ತಾರೆ" ಎಂದರು.

ಇದನ್ನೂ ಓದಿ: ಉತ್ತರ ಭಾರತದಲ್ಲಿ ಚಳಿ ತೀವ್ರ: ದೆಹಲಿಯಲ್ಲಿ ಐದು ದಿನ 5ನೇ ಕ್ಲಾಸ್​ವರೆಗೆ ಶಾಲೆಗೆ ರಜೆ

ಕರ್ನಾಟಕದಲ್ಲಿ ಗೋಧ್ರಾ ದುರಂತದಂತೆ ಮತ್ತೊಂದು ಘಟನೆ ಸಂಭವಿಸಬಹುದು ಎಂದು ಕಾಂಗ್ರೆಸ್ ಎಂಎಲ್​ಸಿ ಬಿ.ಕೆ.ಹರಿಪ್ರಸಾದ್ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿ, "ಹರಿಪ್ರಸಾದ್‌ ಅವರು ಗೋಧ್ರಾ ಬಗ್ಗೆ ಮಾತನಾಡುತ್ತಾರೆ. ಅವರೇಕೆ ಆ ಬಗ್ಗೆ ಮಾಹಿತಿ ಕೊಡಲಿಲ್ಲ?. ಹರಿಪ್ರಸಾದ್‌ ಮಾತನಾಡಿದ ಮೇಲೆ 'INDIA' ಒಕ್ಕೂಟದ ನಾಲ್ಕೈದು ಜನ ಮಾತಾಡಿದ್ರು. ಅಕಸ್ಮಾತ್ ಆಗಿ ಕರ್ನಾಟಕದಲ್ಲಿ ಏನಾದ್ರೂ ಸಂಭವಿಸಿದರೆ ಅದಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣವಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ರಾಮಲಲ್ಲಾ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ತಿರುಪತಿಯಿಂದ ವಿಶೇಷ ಲಡ್ಡು ತಯಾರಿ

ಪುನೀತ್ ಕೆರೆಹಳ್ಳಿ ಹೆಸರು ಬಳಸಿ ಕೋಮು ಗಲಭೆಗೆ ಪತ್ವಾ ಬಗ್ಗೆ ಮಾತನಾಡಿದ ಬೊಮ್ಮಾಯಿ, ‌"ಬಿಜೆಪಿ ಕೋಮುವಾದಿ ಅಂತಾರೆ. ಆದ್ರೆ ನಿಜವಾದ ಕೋಮುವಾದಿ ಕಾಂಗ್ರೆಸ್" ಎಂದು ವಾಗ್ದಾಳಿ ನಡೆಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.