ಧಾರವಾಡ: ಕಾಂಗ್ರೆಸ್ನವರು ಮೀಸಲಾತಿ ಗೆಜೆಟ್ ನೋಟಿಫಿಕೇಶನ್ಗೆ ಬೆಂಕಿ ಹಚ್ಚುವ ಕೆಲಸ ಮಾಡಿದರು. ಸರ್ಕಾರ ಬಂದ ಮೇಲೆ ಮೀಸಲಾತಿ ರದ್ದು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಅವರಿಗೆ ಆ ತಾಕತ್ತು, ಧಮ್ ಇದೆಯಾ? ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದರು. ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ಸೋಮವಾರ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ಧಾರವಾಡಕ್ಕೆ ಬಂದಾಗ ಪತ್ರಕರ್ತರು ಚುನಾವಣಾ ಪ್ರಚಾರಕ್ಕೆ ಬರ್ತೀರಾ ಅಂತಾ ಕೇಳಿದ್ದರು. ಅವರು ಕೇಳಿದಂತೆ ಈಗ ಬಂದಿದ್ದೇನೆ. ನಾನು ಮೀಸಲಾತಿ ಸಲುವಾಗಿ ಹೋರಾಟ ಮಾಡಿದ್ದೇನೆ. ಅದರ ಫಲವಾಗಿ ಎಲ್ಲರಿಗೂ ಮೀಸಲಾತಿ ಸಿಕ್ಕಿದೆ ಎಂದರು.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ಲಿಂಗಾಯತರು ಭ್ರಷ್ಟರು ಅಂತೀರಾ?. ನಾವೇನು ಅನ್ಯಾಯ ಮಾಡಿದ್ದೇವೆ. ನಿಮಗೆ 200 ಯೂನಿಟ್ ವಿದ್ಯುತ್ ಯಾರಾದರೂ ಕೊಡ್ತಾರಾ?. ಅವರು 10 ಕೆ.ಜಿ ಅಕ್ಕಿ ಕೊಡ್ತಾರಂತೆ. ಅದು ಸಾಧ್ಯನಾ?. ಕಾಂಗ್ರೆಸ್ ಈಗಾಗಲೇ ದಿವಾಳಿ ಆಗಿದೆ. ಅವರು ಹತಾಶರಾಗಿದ್ದಾರೆ ಎಂದು ಟೀಕಿಸಿದರು. ಖರ್ಗೆ ಸಹ ಮೋದಿವರನ್ನು ವಿಷದ ಹಾವಿಗೆ ಹೋಲಿಸಿದರು. ನೀವು 50 ವರ್ಷದ ರಾಜಕಾರಣದಲ್ಲಿದ್ದರೂ ಗೌರವ ನೀಡಿಲ್ಲ. ಸೋನಿಯಾ ಗಾಂಧಿ ಎದುರು ಕೈ ಕಟ್ಟಿ ನಿಲ್ಲುತ್ತೀರಿ. ನಮ್ಮ ದೇಶದ ಪ್ರಧಾನಿ ಅವರು ನಿಮಗೆ ಪ್ರಧಾನಿ ಕೊಟ್ಟ ಮರ್ಯಾದೆ ಸೋನಿಯಾ ಕೊಡಲ್ಲ. ನಿಮಗೆ ಮೋದಿ ಬಗ್ಗೆ ಮಾತನಾಡಲು ನೈತಿಕತೆ ಇದೆಯಾ? ಎಂದು ಹರಿಹಾಯ್ದರು.
ಇದನ್ನೂ ಓದಿ: ಕಾಂಗ್ರೆಸ್ಗೆ ಧಮ್ ಇದ್ದರೆ ಜಗದೀಶ್ ಶೆಟ್ಟರ್ರನ್ನು ಸಿಎಂ ಎಂದು ಘೋಷಿಸಲಿ: ಕಾಂಗ್ರೆಸ್ ಪಕ್ಷಕ್ಕೆ ಸವಾಲೆಸದ ಬಸನಗೌಡ ಪಾಟೀಲ
ಪಾಕಿಸ್ತಾನದವರು ಸಹ ಮೋದಿ ಆಡಳಿತ ಬೇಕು ಎನ್ನುತ್ತಿದ್ದಾರೆ. ಆದರೆ ಇಲ್ಲಿನ ಮಕ್ಕಳಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಇದೆ. ಮಣಿಶಂಕರ್ ಅಯ್ಯರ್ ಪಾಕಿಸ್ತಾನವನ್ನು ಬೆಂಬಲಿಸುತ್ತಾರೆ. ಇದರು ದುರಂತ. ಇನ್ನು 10 ವರ್ಷ ಮೋದಿ ಪ್ರಧಾನಿ ಅದರೆ ಸಾಕು. ನಮ್ಮನ್ನು ಆಳಿದವರು ಈಗ 6ನೇ ಸ್ಥಾನಕ್ಕೆ ಹೋಗಿದ್ದಾರೆ. ಇದು ಬದಲಾವಣೆ. ಕೆಲಸ ಮಾಡಿದವರಿಗೆ ಮತ ಹಾಕಿ ಎಂದು ಯತ್ನಾಳ್ ಮನವಿ ಮಾಡಿದರು.
ಸರ್ವೇಯಲ್ಲಿ ಯಾರು ಹಣ ಕೊಡ್ತಾರೆ ಅವರಿಗೆ ಜಾಸ್ತಿ ಮತ ಬರುತ್ತದೆ ಅಂತಾರೆ. ಅದನ್ನು ನಂಬಬೇಡಿ. 130 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಮೀಸಲಾತಿ ಬಗ್ಗೆ ಕಾಂಗ್ರೆಸ್ ಹೋರಾಟ ಮಾಡುತ್ತಾ ಬಂದರು. ಆದರೆ ನಾವು ಮೀಸಲಾತಿ ನೀಡಿದೆವು. 40 ಪರ್ಸೆಂಟ್ ಸರ್ಕಾರ, 40 ಸೀಟ್ ಬರುತ್ತೆ ಅಂತಾರೆ. ಆದರೆ ಅವರದ್ದು 420 ಸರ್ಕಾರ. ಅವರು 40 ದಾಟಲ್ಲ ಎಂದು ವ್ಯಂಗ್ಯವಾಡಿದರು.
ಐಟಿ ದಾಳಿ ಬಗ್ಗೆ ಪ್ರತಿಕ್ರಿಯಿಸಿದ ಯತ್ನಾಳ್, ಐಟಿ, ಇಡಿ ಯಾರ ಸ್ವತ್ತೂ ಅಲ್ಲ. ನಮ್ಮ ಮೇಲೂ ರೇಡ್ ಆಗಿದೆ. ಅವರು ಯಾರ ಮನೆ ಮೇಲಾದ್ರೂ ರೇಡ್ ಮಾಡಬಹುದು. ಲೂಟಿ ಮಾಡಿದವರ ಮೇಲೆ ಆಗುತ್ತದೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷ ಡಿಕೆಶಿ ಗೂಂಡಾಗಿರಿ ಮಾಡುತ್ತಿದ್ದರು: ಶಾಸಕ ಯತ್ನಾಳ್ ವಾಗ್ದಾಳಿ