ಹುಬ್ಬಳ್ಳಿ : ನಗರದ ಗಬ್ಬೂರು ಬಳಿ ಎಂಎಸ್ಐಎಲ್ ಮಳಿಗೆಯಲ್ಲಿ ಮದ್ಯದ ಬಾಕ್ಸ್ಗಳ ಕಳ್ಳತನ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಬೆಂಡಿಗೇರಿ ಠಾಣೆ ಪೊಲೀರು ಯಶಸ್ವಿಯಾಗಿದ್ದಾರೆ. ಬಂಕಾಪುರ ಚೌಕ್ ನಿವಾಸಿಗಳಾದ ಅರ್ಜುನ್ ದೊಡ್ಡಮನಿ, ಮಲ್ಲಿಕಾರ್ಜುನ್ ಜಾಧವ್ ಹಾಗೂ ಗೊಲ್ಲರ ಕಾಲೋನಿಯ ವಾಸು ಬಂಧಿತ ಆರೋಪಿಗಳಾಗಿದ್ದಾರೆ. ಮತ್ತೋರ್ವ ರಾಜು ಎಂಬಾತ ಪರಾರಿಯಾಗಿದ್ದಾನೆ. ಬಂಧಿತರಿಂದ ಎರಡು ಬೈಕ್ ಹಾಗೂ ಒಂದು ಲಕ್ಷ ರೂ. ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ಇವರು ಇದೇ 28ರಂದು ಎಂಎಸ್ಐಎಲ್ ಮಳಿಗೆಯ ಶೆಟರ್ ಮುರಿದು ಒಳ ಪ್ರವೇಶ ಮಾಡಿ ಒಂದು ಲಕ್ಷ ರೂ. ಮೌಲ್ಯದ ಮದ್ಯದ ಬಾಕ್ಸ್‌ಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಮಳಿಗೆಯ ಮಾಲೀಕರು ಬೆಂಡಿಗೇರಿ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತರಾದ ಪೊಲೀಸರು ಎರಡು ದಿನಗಳಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಇನ್ಸ್ಪೆಕ್ಟರ್ ಅರುಣ್‌ಕುಮಾರ್ ಸೂಳಂಕೆ ಸೇರಿ ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಆಯುಕ್ತ ಆರ್.ದಿಲೀಪ್ ಶ್ಲಾಘಿಸಿದ್ದಾರೆ.