ETV Bharat / state

ಹುಬ್ಬಳ್ಳಿ ಮೂರುಸಾವಿರ ಮಠ ಉತ್ತರಾಧಿಕಾರಿ ವಿವಾದ: ಪೊಲೀಸ್​ ಇಲಾಖೆಯಿಂದ ಭದ್ರತೆ ಪರಿಶೀಲನೆ - ಮೂರು ಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕ

ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಿರುವ ಹಿನ್ನೆಲೆ ಶ್ರೀಮಠಕ್ಕೆ ಭೇಟಿ ನೀಡಿದ ಪೊಲೀಸರು ಭದ್ರತೆ ದೃಷ್ಟಿಯಿಂದ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿದರು.

successor of the Moorusavira Math
ಪೊಲೀಸ್​ ಇಲಾಖೆಯಿಂದ ಭದ್ರತೆ ಪರಿಶೀಲನೆ
author img

By

Published : Feb 19, 2020, 1:22 PM IST

ಹುಬ್ಬಳ್ಳಿ : ಮೂರುಸಾವಿರ ಮಠಕ್ಕೆ ಉತ್ತರಾಧಿಕಾರಿ ನೇಮಕ ಮಾಡಲಿರುವ ಹಿನ್ನೆಲೆ ಶ್ರೀಮಠಕ್ಕೆ ಭೇಟಿ ನೀಡಿದ ಪೊಲೀಸರು ಭದ್ರತೆ ದೃಷ್ಟಿಯಿಂದ ಕೈಗೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಕುರಿತು ಪರಿಶೀಲಿಸಿದರು.

ಐಎಸ್​ಡಿ ಹು-ಧಾ ಇನ್​​ಸ್ಪೆಕ್ಟರ್ ‌ಶ್ರೀಶೈಲ ಬ್ಯಾಕೋಡ್ ಹಾಗೂ ಗುಪ್ತದಳ ಹು-ಧಾ ವಿಭಾಗದ ಇನ್​​ಸ್ಪೆಕ್ಟರ್ ಅಮೋಲ್ ಕಾಳೆ ನೇತೃತ್ವದಲ್ಲಿ ಸಿಬ್ಬಂದಿ ಶ್ರೀಮಠಕ್ಕೆ ಭೇಟಿ ನೀಡಿ ಭದ್ರತೆ ಪರಿಶೀಲಿಸಿತು. ದುರಸ್ಥಿಯಲ್ಲಿರುವ ಸಿಸಿ ಟಿವಿ ಕ್ಯಾಮೆರಾಗಳನ್ನು ಸರಿಪಡಿಸುವಂತೆ ಕಮರಿಪೇಟೆ ಠಾಣೆ ಇನ್​​ಸ್ಪೆಕ್ಟರ್ ಬಸವರಾಜ ಬುದ್ನಿ ಅವರಿಗೆ ಸೂಚಿಸಿದ್ದಾರೆ.

ಪೊಲೀಸ್​ ಇಲಾಖೆಯಿಂದ ಭದ್ರತೆ ಪರಿಶೀಲನೆ

ಭಾನುವಾರ ಮೂರುಸಾವಿರ ಮಠದ ಉತ್ತರಾಧಿಕಾರಿ ಕುರಿತಂತೆ ಬಹಿರಂಗ ಚರ್ಚೆಗೆ ದಿಂಗಾಲೇಶ್ವರ ಶ್ರೀಗಳು ಆಹ್ವಾನ ‌ನೀಡಿದ್ರು. ಸಾವಿರಾರು ‌ಸಂಖ್ಯೆಯಲ್ಲಿ ಭಕ್ತರು ಸೇರುವ ನಿರೀಕ್ಷೆ ಇದೆ. ಪರ ಹಾಗೂ ವಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್​​ ಇಲಾಖೆ ಮುಂಜಾಗ್ರತೆ ವಹಿಸಿದೆ.‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.