ಧಾರವಾಡ: ನಗರದಲ್ಲಿ ದೊಡ್ಡ ಮಟ್ಟದ ಅಂದರ್ ಬಾಹರ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡದಲ್ಲಿ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಪ್ರತಿಕ್ರಿಯಿಸಿದ್ದಾರೆ.
ಅವ್ಯಾಹತವಾಗಿ ದಂಧೆ ಬಗ್ಗೆ ದೂರು ಬಂದಿದ್ವು, ಅದಕ್ಕಾಗಿ ಮಾಹಿತಿ ಆಧರಿಸಿ ದಾಳಿ ನಡೆಸಿರುವುದಾಗಿ ತಿಳಿಸಿದ ಅವರು, ಎರಡು ಕಡೆಗೆ ದೊಡ್ಡ ಮಟ್ಟದ ದಾಳಿ ನಡೆಸಿದ್ದು, ರಮ್ಯಾ ಹಾಗೂ ಪ್ರೀತಿ ಹೋಟೆಲ್ನಲ್ಲಿ ಜೂಜು ದಂಧೆ ಪತ್ತೆಯಾಗಿದೆ. ಪ್ರೀತಿ ಹೋಟೆಲ್ನಲ್ಲಿ 70 ಜನರು, 65 ಮೊಬೈಲ್, 7 ಲಕ್ಷ ಹಾಗೂ ರಮ್ಯಾ ಹೋಟೆಲ್ನಲ್ಲಿ 56 ಜನರು 40 ಕಾರ್ ಹಾಗೂ 49 ಲಕ್ಷ ಜಪ್ತಿ ಮಾಡಲಾಗಿದೆ ಎಂದು ಐಜಿಪಿ ಮಾಹಿತಿ ನೀಡಿದರು.
ಭೀಮಾತೀರದ ಹಂತಕ ಸಾಹುಕಾರ್ ಮೇಲೆ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಾಹುಕಾರ್ ಸ್ಥಿತಿ ಸ್ಥಿರವಾಗಿದೆ. ಈಗಾಗಲೇ 21 ಜನರನ್ನು ಬಂಧಿಸಲಾಗಿದೆ. ಮುಂಬೈ, ಪುಣೆ ಸೇರಿದಂತೆ ವಿಜಯಪುರದಲ್ಲಿ ಆರೋಪಿಗಳನ್ನ ಬಂಧಿಸಲಾಗಿದೆ. ಸಚಿವ ಚವ್ಹಾಣ ಹಾಗೂ ಮಡು ಹಿರೇಮಠ ಸ್ವಾಮಿ ಬಂಧನಕ್ಕೆ ಜಾಲ ಬೀಸಲಾಗಿದೆ. ಇನ್ನು 13 ಜನರು ಜನರು ಶೂಟೌಟ್ನಲ್ಲಿ ಭಾಗಿಯಾಗಿದ್ದಾರೆ. ಆದಷ್ಟು ಬೇಗನೇ ಬಂಧಿಸಲಾಗುವುದು ಎಂದರು.