ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನೋರ್ವನಿಗೆ ಇನ್ನೊಬ್ಬ ಯುವಕ ಚಾಕುವಿನಿಂದ ಇರಿದ ಘಟನೆ ತಡರಾತ್ರಿ ನಗರದ ಚಂದ್ರಕಲಾ ಟಾಕೀಸ್ ಹತ್ತಿರ ನಡೆದಿದೆ.
ಅರ್ಬಾಜ್ ಮಾನಿಯಾರ (18) ಹಲ್ಲೆಗೊಳಗಾದ ಯುವಕ. ವಿಶಾಲ ಕೋದಂಡರಾಮ (21) ಎಂಬಾತನೇ ಚಾಕು ಹಲ್ಲೆಮಾಡಿರುವ ವ್ಯಕ್ತಿ. ತಡರಾತ್ರಿ ಚಂದ್ರಕಲಾ ಟಾಕೀಸ್ ಹತ್ತಿರ ಪಾನಶಾಪ್ವೊಂದರಲ್ಲಿ ಆರೋಪಿ ವಿಶಾಲ ಸಿಗರೇಟ್ ಕೊಳ್ಳಲು ಬಂದಾಗ ಅರ್ಬಾಜ್ ಮಾನಿಯಾರ್ ಎಂಬ ಕಾಲು ತುಳಿದನೆಂಬ ನೆಪದಲ್ಲಿ ಇಬ್ಬರಲ್ಲಿ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಇಬ್ಬರು ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ ಆರೋಪಿ ವಿಶಾಲ ತನ್ನ ಬಳಿ ಇದ್ದ ನೇಲ್ಕಟರ್ನ ಚಾಕುವಿನಿಂದ ಎದೆ ಮತ್ತು ಹೊಟ್ಟೆಯ ಭಾಗಕ್ಕೆ ಹೊಡಿದಿದ್ದಾನೆ.
ಜಗಳ ಬಿಡಿಸಲು ಬಂದ ವ್ಯಕ್ತಿಗು ಗಾಯಗಳಾಗಿದ್ದು, ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.