ಹುಬ್ಬಳ್ಳಿ : ರಾಜ್ಯಾದ್ಯಂತ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸರು ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಿದ್ದಾರೆ. ಆದರೆ, ಹುಬ್ಬಳ್ಳಿ-ಧಾರವಾಡ ಕಮಿಷನರ್ ಅವರು ಸಾರ್ವಜನಿಕರ ಮೇಲೆ ಕೈ ಮಾಡಬಾರದು ಎಂಬ ಆದೇಶ ನೀಡಿದ್ದರೂ ಸಹ ಎಎಸ್ಐ ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಲಾಕ್ಡೌನ್ ಜಾರಿ ಇದ್ದರೂ, ಬೇಕಾಬಿಟ್ಟಿ ಓಡಾಡುತ್ತಿದ್ದಾನೆ ಎಂದು ಆರೋಪಿಸಿರುವ ಪೊಲೀಸರು ಯುವಕನಿಗೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಅಲ್ಲದೇ, ಯುವಕನಿಗೆ ಹೊಡೆದ ಪರಿಣಾಮ ಮುಖದ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಎಎಸ್ಐ ಗೌರಿಮಠ ಅವರು, ಯುವಕನಿಗೆ ನಾನು ಹೊಡೆದಿಲ್ಲವೆಂದು ಹೇಳುತ್ತಿದ್ದಾರೆ. ಆದರೆ, ಅಸಲಿಗೆ ಅಲ್ಲಿ ನಡೆದದ್ದೇನು? ಎಂಬುದನ್ನ ಅಧಿಕಾರಿಗಳು ಪರಿಶೀಲನೆ ನಡೆಸಬೇಕಿದೆ. ಕಸಬಾಪೇಟೆ ಪ್ರದೇಶದಲ್ಲಿ ಬಂದೋಬಸ್ತ್ ನಡೆಸುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಓದಿ: ರಾಜ್ಯದಲ್ಲಿಂದು ಕೋವಿಡ್ಗೆ 490 ಮಂದಿ ಬಲಿ.. 47 ಸಾವಿರಕ್ಕೂ ಅಧಿಕ ಕೇಸ್ ದಾಖಲು!