ಧಾರವಾಡ: ಬೆಂಗಳೂರಿನ ಡಿ.ಜೆ.ಹಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯನ್ನು ಕಲಾವಿದ ಮಂಜುನಾಥ ಹಿರೇಮಠ ಎಂಬುವರು ಗಣೇಶ ಮೂರ್ತಿ ತಯಾರಿಸುವ ಮೂಲಕ ಖಂಡಿಸಿದ್ದಾರೆ.
ಧಾರವಾಡದ ಕೆಲಗೇರಿ ಗಾಯತ್ರಿಪುರ ನಿವಾಸಿ ಮಂಜುನಾಥ ಎರಡು ಗಂಟೆಗಳ ಕಾಲ ಗಣೇಶ ಮೂರ್ತಿ ತಯಾರಿಸಿದ್ದಾರೆ. ಅದರಲ್ಲಿ ಕ್ಯಾಮರಾ, ಲೋಗೋ, ಪೆನ್ ಹಾಗೂ ನೋಟ್ ಪ್ಯಾಡ್ ಬಿಡಿಸಿರುವ ಅವರು, ಭಗವಂತ ಪತ್ರಕರ್ತರನ್ನು ಎಲ್ಲಾ ರೀತಿಯಲ್ಲಿ ರಕ್ಷಿಸಲಿ ಎಂದು ಪ್ರಾರ್ಥಿಸಿದ್ದಾರೆ.