ಹುಬ್ಬಳ್ಳಿ: ಅಕ್ರಮವಾಗಿ ಕಾರವಾರ ಹಾಗು ಗೋವಾಗೆ ಗಾಂಜಾ ಸಾಗಿಸುತ್ತಿದ್ದ ಯುವಕನನ್ನು ಬಂಧಿಸಿದ ಪೊಲೀಸರು 50 ಕೆ.ಜಿಗೂ ಅಧಿಕ ಪ್ರಮಾಣದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಬೀದರ್ ಮೂಲದ ಸಿದ್ದರಾಮ ವಿಶ್ವನಾಥ ಗುಂಡೆ (29) ಬಂಧಿತ ಆರೋಪಿ. ಪೊಲೀಸರು ಈತನಿಂದ ₹10 ಲಕ್ಷ ಮೌಲ್ಯದ 52.6 ಕೆ.ಜಿ ಗಾಂಜಾ ಹಾಗು ಒಂದು ಕಾರು, ಮೊಬೈಲ್ ವಶಕ್ಕೆ ಪಡೆದಿದ್ದಾರೆ.
ಬೀದರ್ನ ಬಾಲ್ಕಿಯಿಂದ ಹುಬ್ಬಳ್ಳಿಗೆ ಕಾರಿನಲ್ಲಿ ಗಾಂಜಾ ಸಾಗಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ.