ಧಾರವಾಡ : ನುಗ್ಗಿಕೇರಿ ಧರ್ಮ ವ್ಯಾಪಾರ ಗಲಾಟೆ ವಿಚಾರ ಧಾರವಾಡದಲ್ಲಿ ಶಾಸಕ ಅರವಿಂದ ಬೆಲ್ಲದ್ ಪ್ರತಿಕ್ರಿಯಿಸಿದ್ದಾರೆ. ಘಟನೆ ನಡೆಯಬಾರದಿತ್ತು. ಆದರೆ, ಇದು ಯಾಕೆ ಆಗುತ್ತಿದೆ ಅಂತಾನೂ ವಿಚಾರ ಮಾಡಬೇಕಿದೆ. ಘಟನೆ ಆಗೋಕೆ ಕಾರಣವಾದ ವಿಷಯಗಳ ಬಗ್ಗೆ ನೋಡಬೇಕಿದೆ. ಹೈಕೋರ್ಟ್ ಹಿಜಾಬ್ ಬಗ್ಗೆ ತೀರ್ಪು ಕೊಟ್ಟಿತ್ತು. ಶಾಲೆಗಳಲ್ಲಿ ಸಮವಸ್ತ್ರ ಅಂತಾ ತೀರ್ಪು ಆಗಿತ್ತು. ಅದಕ್ಕೆ ಮುಸ್ಲಿಂ ಸಂಘಟನೆಗಳು ಬಂದ್ ಮಾಡಿದ್ದವು. ಆಗ ಕಾನೂನು ಕಾಳಜಿ, ಗೌರವ ಇಲ್ಲ ಅಂತಾ ಗೊತ್ತಾಯ್ತು. ಇದರಿಂದ ಇಂತಹ ಘಟನೆಗಳು ನಡೆಯುತ್ತಿವೆ ಎಂದರು.
ತಲೆ ಒಡೆದಾಗ ಇಲ್ಲದ ಕಾಳಜಿ, ಕಲ್ಲಂಗಡಿ ಒಡೆದಾಗ ಏಕೆ ಅಂತಾ ಸಿಟಿ ರವಿ ಹೇಳಿಕೆ ವಿಚಾರಕ್ಕೆ ಮಾತನಾಡಿದ ಅವರು, ಅವರು ಸರಿಯಾಗಿಯೇ ಹೇಳಿದ್ದಾರೆ. ಮುಸ್ಲಿಂ ಸಮಾಜದ ನಾಯಕರು ಮೊದಲು ವಿಚಾರ ಮಾಡಬೇಕಿದೆ. ಇಲ್ಲದೇ ಹೋದಲ್ಲಿ ಆ್ಯಕ್ಷನ್‌ಗೆ-ರಿಯಾಕ್ಷನ್ ಆಗುತ್ತಾ ಹೋಗುತ್ತದೆ. ನುಗ್ಗಿಕೇರಿ ಖಾಸಗಿ ದೇವಸ್ಥಾನ, ಅಲ್ಲಿ ಯಾರ ಅಂಗಡಿ ಇರಬೇಕು ಅನ್ನೋದು ಆಡಳಿತ ಮಂಡಳಿಗೆ ಬಿಟ್ಟಿದ್ದು ಎಂದರು.
ಮುಸ್ಲಿಂ ಸಮಾಜದ ನಾಯಕರು ತಪ್ಪು ಆದಾಗ ತಪ್ಪು ಅಂತಾ ಹೇಳಬೇಕಿದೆ. ಹೈಕೋರ್ಟ್ ತೀರ್ಪಿಗೆ ಬಂದ್ ಮಾಡಿಸಿದ್ದರು. ಅದರ ರಿಯಾಕ್ಷನ್ ಹೀಗೆ ಆಗುತ್ತಿರುವುದು. ಇಂತಹ ಸಮಸ್ಯೆಗಳಿಗೆ ಮೂಲದಿಂದ ಕಾರಣ ಹುಡುಕಿದಾಗ ಮಾತ್ರ ಪರಿಹಾರ ಮಾಡಲು ಸಾಧ್ಯ ಎಂದರು.
ಇದನ್ನೂ ಓದಿ:'ನನಗೆ ಸ್ವತಂತ್ರ ಸರ್ಕಾರ ನೀಡಿ, ನಾನು ರಾಮರಾಜ್ಯ ಕೊಡಲಿಲ್ಲ ಅಂದ್ರೆ ಜೆಡಿಎಸ್ ವಿಸರ್ಜನೆ ಮಾಡುತ್ತೇನೆ'