ಧಾರವಾಡ: ಇಲ್ಲಿನ ಹೊಸ ಯಲ್ಲಾಪುರದ ನವಲೂರ ಅಗಸಿ (ಕೋಳಿಕೆರೆ) ಯಲ್ಲಿ ಇಂದು ಮತ್ತೊಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಕೆಮ್ಮು, ನೆಗಡಿ ಹಾಗೂ ಜ್ವರದಿಂದ ಬಳಲುತ್ತಿದ್ದ 35 ವರ್ಷದ ವ್ಯಕ್ತಿಯೊಬ್ಬರಲ್ಲಿ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇದು ರಾಜ್ಯದ 705ನೇ ಪ್ರಕರಣವಾಗಿರುವುದರಿಂದ P- 705 ಎಂದು ಗುರುತಿಸಲಾಗಿದೆ.
ಇದು ಜಿಲ್ಲೆಯ 12ನೇ ಪ್ರಕರಣವಾಗಿದೆ. ಈಗಾಗಲೇ 06 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದವರು ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.