ETV Bharat / state

9 ಮಂದಿಗೆ ಕೊರೊನಾ: ಕ್ವಾರಂಟೈನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಅಮೃತ ದೇಸಾಯಿ - ಶಾಸಕ ಅಮೃತ ದೇಸಾಯಿ

ಧಾರವಾಡದ ದೊಡ್ಡ ನಾಯಕನಕೊಪ್ಪದ ಸರ್ಕಾರಿ ಮೆಟ್ರಿಕ್​​ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಆಗಿದ್ದ ಒಂಭತ್ತು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಶಾಸಕ ಅಮೃತ ದೇಸಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Amrita Desa visited Corona location
ಕೊರೊನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಶಾಸಕ ಅಮೃತ ದೇಸಾಯಿ
author img

By

Published : May 13, 2020, 9:23 PM IST

ಧಾರವಾಡ: ಕೊರೊನಾ ಧಾರವಾಡಕ್ಕೆ ಬಂದಾಗಿನಿಂದಲೂ ಚುರುಕಿನಿಂದ ಕೆಲಸ ಮಾಡುತ್ತಿರುವ ಶಾಸಕ ಅಮೃತ ದೇಸಾಯಿ, ಕ್ಷೇತ್ರದ ಜನತೆಯ ಸುರಕ್ಷೆಗೆ ಮಾಸ್ಕ್​​, ಸ್ಯಾನಿಟೈಸರ್​​ ಹಾಗೂ ಬಡ ಜನರಿಗೆ ಆಹಾರ ಸಾಮಗ್ರಿಗಳ ಕಿಟ್​​​ಗಳನ್ನು ನೀಡುತ್ತಿದ್ದಾರೆ.

ನಿನ್ನೆ ಬೇರೆ ರಾಜ್ಯದಿಂದ ಬಂದು ದೊಡ್ಡ ನಾಯಕನಕೊಪ್ಪದ ಸರ್ಕಾರಿ ಮೆಟ್ರಿಕ್​​ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಕ್ವಾರಂಟೈನ್ ಆಗಿದ್ದ ಒಂಭತ್ತು ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಲ್ಲದೆ ಸರ್ಕಾರಿ ವಸತಿ ನಿಲಯ, ಸಂಪಿಗೆ ನಗರ ಒಳಗೊಂಡಂತೆ ಸುತ್ತಮುತ್ತಲಿನ ಸ್ಥಳಕ್ಕೆ ಔಷಧಿ ಸಿಂಪಡಿಸಲು ಅಗ್ನಿಶಾಮಕ ದಳಕ್ಕೆ ತಿಳಿಸಿದ್ದಾರೆ. ಆ ಜಾಗಕ್ಕೆ ಯಾರೂ ಹೋಗದಂತೆ ಭದ್ರತೆ ನೀಡಲು ಪೊಲೀಸರಿಗೆ ತಿಳಿಸಿ ಕ್ಷೇತ್ರದ ಜನತೆಗೆ ಅಭಯ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.