ETV Bharat / state

ಕೊರೊನಾ ಭೀತಿ ನಡುವೆಯೂ ಹುಬ್ಬಳ್ಳಿಯಲ್ಲಿ ದಾಖಲೆಯ ಮದ್ಯ ಮಾರಾಟ! - ಕೊರೊನಾ ನಡುವೆಯೂ ಹುಬ್ಬಳ್ಳಿಯಲ್ಲಿ ದಾಖಲೆಯ ಮದ್ಯ ಮಾರಾಟ,

ಕೊರೊನಾ ಆತಂಕದ ನಡುವೆಯೂ ಹುಬ್ಬಳ್ಳಿಯಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ.

Alcohol sale record, Alcohol sale record in Hubli, Alcohol sale news, Alcohol sale record at Corona pandemic time, ದಾಖಲೆಯ ಮದ್ಯ ಮಾರಾಟ, ಹುಬ್ಬಳ್ಳಿಯಲ್ಲಿ ದಾಖಲೆಯ ಮದ್ಯ ಮಾರಾಟ, ಕೊರೊನಾ ನಡುವೆಯೂ ಹುಬ್ಬಳ್ಳಿಯಲ್ಲಿ ದಾಖಲೆಯ ಮದ್ಯ ಮಾರಾಟ, ಮದ್ಯ ಮಾರಾಟ ಸುದ್ದಿ,
ಕೊರೊನಾ ಭೀತಿ ನಡೆಯೂ ಹುಬ್ಬಳ್ಳಿಯಲ್ಲಿ ದಾಖಲೆಯ ಮದ್ಯ ಮಾರಾಟ
author img

By

Published : Jan 2, 2021, 1:21 PM IST

ಹುಬ್ಬಳ್ಳಿ: ಕೊರೊನಾ ವೈರಸ್ ಎಲ್ಲಾ ಆರ್ಥಿಕ ಚಟುವಟಿಕೆಗಳ ಮೇಲೆಯೂ ಹೊಡೆತ ಕೊಟ್ಟಿದೆ. ವೈರಸ್ ಭೀತಿಯಿಂದ ನ್ಯೂ ಇಯರ್ ಪಾರ್ಟಿ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಿದರೂ ಮದ್ಯ ಪ್ರೀಯರು ಮಾತ್ರ ತಮ್ಮ ಮೋಜಿ ಮಸ್ತಿಗೆ ಯಾವುದೇ ಹಿನ್ನಡೆಯನ್ನು ಮಾಡದೇ ಹೊಸ ವರ್ಷ ಆಚರಿಸಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ದಾಖಲೆಯ ಮದ್ಯ ಮಾರಾಟವಾಗಿದೆ.

ಕೊರೊನಾ ಭೀತಿ ನಡೆಯೂ ಹುಬ್ಬಳ್ಳಿಯಲ್ಲಿ ದಾಖಲೆಯ ಮದ್ಯ ಮಾರಾಟ

ಹೌದು. ಸೋಂಕು ಹರಡುವಿಕೆಯಿಂದಾಗಿ ವಿವಿಧ ವಸ್ತುಗಳ ವಹಿವಾಟು ಕುಸಿದಿದೆ. ಹೊಸ ವರ್ಷ ಆಚರಣೆ ಮುನ್ನಾ ದಿನ ಕೇಕ್‌ಗಳ ಮಾರಾಟವೂ ಕಡಿಮೆಯಿತ್ತು. ಆದರೆ, ಮದ್ಯದ ಮಾರಾಟ ಮಾತ್ರ ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಾಗಿದೆ.

ಹೊಸ ವರ್ಷ ಆಚರಣೆಯ ಹಿಂದಿನ ದಿನ ಮಾತ್ರವಲ್ಲ ಡಿಸೆಂಬರ್‌ ತಿಂಗಳಿನಲ್ಲಿ ಮದ್ಯ ಮಾರಾಟ ಹೆಚ್ಚಳವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ನಡೆದ ಗ್ರಾಮ ಪಂಚಾಯ್ತಿ ಚುನಾವಣೆ ಕಾರಣದಿಂದಲೂ ಮಾರಾಟದಲ್ಲಿ ಏರಿಕೆ ಕಂಡು ಬಂದಿದೆ.

2019ರ ಡಿಸೆಂಬರ್ ತಿಂಗಳಿ ನಲ್ಲಿ 1,41,961 ಪೆಟ್ಟಿಗೆ ಮದ್ಯ ಮಾರಾಟವಾಗಿತ್ತು. 2020ರ ಡಿಸೆಂಬರ್‌ನಲ್ಲಿ 1,50,754 ಪೆಟ್ಟಿಗೆ ಮದ್ಯ ಮಾರಾಟವಾಗಿದೆ. 8,793 ಪೆಟ್ಟಿಗೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. 76,599 ಪೆಟ್ಟಿಗೆ ಬಿಯರ್‌ ಮಾರಾಟವಾಗಿದ್ದರೆ, 81,226 ಪೆಟ್ಟಿಗೆ ಈ ಬಾರಿ ಸೇಲ್​ ಆಗಿದೆ. ಹೊಸ ವರ್ಷದ ಮುನ್ನಾ ದಿನವಾದ ಡಿ.31ರಂದು 7,222 ಪೆಟ್ಟಿಗೆ ಮದ್ಯವನ್ನು ಬಾರ್‌ ಶಾಪ್‌ನವರು ಖರೀದಿಸಿದ್ದಾರೆ. ಕಳೆದ ವರ್ಷ 6,206 ಪೆಟ್ಟಿಗೆ ಖರೀದಿಸಿದ್ದರು. ಈ ವರ್ಷ 4,538 ಬಿಯರ್‌ ಪೆಟ್ಟಿಗೆ ಇದ್ದರೆ, ಕಳೆದ ವರ್ಷ 3,011 ಪೆಟ್ಟಿಗೆ ಮಾರಾಟವಾಗಿತ್ತು.

ಡಿ.22 ಹಾಗೂ 27ರಂದು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಪಂಚಾಯ್ತಿ ಚುನಾವಣೆಗೆ ಮತದಾನ ನಡೆಯಿತು. ಚುನಾವಣೆ ಹಿನ್ನೆಲೆ ಪಾರ್ಟಿಗಳ ಆಯೋಜನೆ ಹೆಚ್ಚಿದ್ದರಿಂದ ಮದ್ಯ ಮಾರಾಟದ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ. ಕೊರೊನಾ ಹರಡುವಿಕೆ ತಡೆಗಟ್ಟಲು ಮಾರ್ಚ್‌ 24 ರಿಂದ ಮೇ ಮೊದಲ ವಾರದವರೆಗೆ ಮದ್ಯದಂಗಡಿ ಬಂದ್‌ ಆಗಿದ್ದವು. ನಂತರದಲ್ಲಿ ಪಾರ್ಸಲ್‌ಗೆ ಮಾತ್ರ ಅವಕಾಶ ನೀಡಲಾಗಿತ್ತು. ಈಗ ಮೊದಲಿನಂತೆ ತೆರೆದಿವೆ. ಆದಾಯ ಕುಸಿತ ಸರಿದೂಗಿಸಲು ಸರ್ಕಾರವು ಶೇ 17ರಷ್ಟು ತೆರಿಗೆಯನ್ನು ಹೆಚ್ಚುವರಿಯಾಗಿ ವಿಧಿಸಿದೆ. ಮದ್ಯದ ಬೆಲೆ ಹೆಚ್ಚಾಗಿದ್ದರೂ, ಮಾರಾಟ ಮಾತ್ರ ಕುಸಿದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.