ಹುಬ್ಬಳ್ಳಿ: ಡಿಸೆಂಬರ್ 1ರ ಏಡ್ಸ್ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯ ಕೆಎಲ್ಇ ಕಾಲೇಜ್‌ನ ವಿದ್ಯಾರ್ಥಿಗಳಿಂದ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ನಗರದ ಹಳೇ ಬಸ್ ನಿಲ್ದಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಏಡ್ಸ್ ಕುರಿತು ಬೀದಿ ನಾಟಕದ ಅಭಿಯಾನದಲ್ಲಿ ಏಡ್ಸ್ ಹೇಗೆ ಬರುತ್ತೆ, ಹೇಗೆ ತಡೆಗಟ್ಟಬಹುದು ಎಂಬುವುದರ ಬಗ್ಗೆ ಅರಿವು ಮೂಡಿಸಿದರು. ಅಲ್ಲದೇ ಏಡ್ಸ್ ಬಂದಂತಹ ವ್ಯಕ್ತಿಯ ಲಕ್ಷಣಗಳೇನು?. ಯಾವ ರೀತಿ ಅವರ ದೇಹದಲ್ಲಿ ಬದಲಾವಣೆ ಆಗುತ್ತೆ ಎಂದು ವಿದ್ಯಾರ್ಥಿಗಳು ನಾಟಕದ ಮುಖಾಂತರ ತಿಳಿಸಿದರು. ಏಡ್ಸ್ ಕೇವಲ ಲೈಂಗಿಕ ಸಂಪರ್ಕದಿಂದ ಬರುವುದಿಲ್ಲ. ರಕ್ತ ಬದಲಾವಣೆ ಹಾಗೂ ಟ್ಯಾಟೂ, ಮಾರಕ ಇಂಜೆಕ್ಷನ್ ಮುಖಾಂತರ ಬರುವುದು ಎಂದು ನಾಟಕದಲ್ಲಿ ಪ್ರದರ್ಶಿಸುವ ಮೂಲಕ ವಿದ್ಯಾರ್ಥಿಗಳು ಜನಜಾಗೃತಿ ಮೂಡಿಸಿದರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಸೇರಿ ನೂರಾರು ವಿದ್ಯಾರ್ಥಿಗಳು ಭಾಗಿಯಾಗಿದ್ದರು.