ಧಾರವಾಡ: ಕೃಷಿ ವಿಶ್ವವಿದ್ಯಾಲಯದ ಬಳಿಯಿರುವ ಮತ ಏಣಿಕೆ ಕೇಂದ್ರದ ಹೊರಗೆ ಪೊಲೀಸರ ಜತೆ ಏಜೆಂಟ್ ಕಿರಿಕ್ ಮಾಡಿಕೊಂಡಿದ್ದಾರೆ.
ಒಬ್ಬ ಅಭ್ಯರ್ಥಿ ಪರವಾಗಿ ಒಬ್ಬ ಏಜೆಂಟ್ಗೆ ಮಾತ್ರ ಮತ ಎಣಿಕೆ ಕೇಂದ್ರಕ್ಕೆ ಹೋಗಲು ಅವಕಾಶವಿರುತ್ತದೆ. ಮತ್ತೊಬ್ಬ ವ್ಯಕ್ತಿ, ತಾನೂ ಮತ ಎಣಿಕೆ ಕೇಂದ್ರಕ್ಕೆ ಹೋಗುತ್ತೇನೆ ಎಂದು ಪಟ್ಟು ಹಿಡಿದ ಹಿನ್ನೆಲೆ ಏಜೆಂಟ್ ಜತೆ ಪೊಲೀಸರು ವಾಗ್ವಾದ ನಡೆಸಿದರು. ಸ್ಥಳಕ್ಕಾಗಮಿಸಿದ ಜಿಲ್ಲಾಧಿಕಾರಿಯೂ ಆತನಿಗೆ ಬುದ್ಧಿ ಹೇಳಿದರೂ, ಆತ ಕೇಳದೆ, ನಾನು ಒಳಗೆ ಹೋಗುತ್ತೇನೆ ಎಂದು ಮೊಂಡು ಹಠ ಮಾಡಿ ಪೊಲೀಸರೊಂದಿಗೆ ಜಗಳ ಮಾಡಿದ್ದಾನೆ.
ಸೋತ ಅಭ್ಯರ್ಥಿಯ ಹೈಡ್ರಾಮಾ
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸೋತ ಪಕ್ಷೇತರ ಅಭ್ಯರ್ಥಿ ಹೈಡ್ರಾಮಾ ಸೃಷ್ಟಿಸಿದ್ದಾನೆ. ವಾರ್ಡ್ ನಂಬರ್ 48 ರಲ್ಲಿರುವ ಶ್ರೀಕಾಂತರೆಡ್ಡಿ ಮತ ಎಣಿಕೆ ಕೇಂದ್ರದ ಬಳಿ ಚೀರಾಡಿದ್ದು, ಇದೊಂದು ಸೆಟ್ಟಿಂಗ್ ರಾಜಕಾರಣ ಎಂದು ಆರೋಪಿಸಿದ್ದಾರೆ.
ನಮ್ಮ ಮನೆಯಲ್ಲಿಯೇ ನೂರು ವೋಟ್ಗಳಿವೆ. ನಮ್ಮ ವೋಟ್ಗಳೇ ನಮಗೆ ಬಂದಿಲ್ಲ ಎಂದು ಕೂಗಾಡಿದ್ದು, ಮಧ್ಯಪ್ರವೇಶಿಸಿದ ಪೊಲೀಸರು, ಆತನನ್ನು ಹೊರಗೆ ಕಳುಹಿಸಿದ್ದಾರೆ.
ಬೆಳಗಾವಿಯಲ್ಲಿ ನಿಯಮ ಉಲ್ಲಂಘನೆ
ಗೆದ್ದ ಅಭ್ಯರ್ಥಿಗಳ ಪರ ವಿಜಯೋತ್ಸವ ಆಚರಿಸಬಾರದೆಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಎಚ್ಚರಿಕೆ ನೀಡಿದ್ದರೂ, ಬಿಜೆಪಿ ಅಭ್ಯರ್ಥಿ ಹಾಗೂ ಅಭಿಮಾನಿಗಳು ನಿಯಮ ಉಲ್ಲಂಘಿಸಿದ್ದಾರೆ.
ಮತ ಎಣಿಕೆ ಕೇಂದ್ರದ ಹೊರವಲಯದಲ್ಲಿ ಬಣ್ಣ ಎರಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.