ETV Bharat / state

ನಟ ಸುರೇಶ್ ಹೆಬ್ಳೀಕರ್ ಇಮೇಲ್​ ಹ್ಯಾಕ್​; ಮಣಿಪುರ ಸಂಘರ್ಷ ಮುಂದಿಟ್ಟು ಹಣಕ್ಕೆ ಬೇಡಿಕೆ - ಈಟಿವಿ ಭಾರತ ಕನ್ನಡ

ನಟ ಹಾಗೂ ಪರಿಸರವಾದಿ ಸುರೇಶ್​ ಹೆಬ್ಳೀಕರ್ ಅವರ ಇಮೇಲ್​ ಹ್ಯಾಕ್​ ಹಾಕಿದೆ. ಮಣಿಪುರ ಸಂಘರ್ಷ ಮುಂದಿಟ್ಟುಕೊಂಡು ಪರಿಚಯಸ್ಥರಲ್ಲಿ ಹ್ಯಾಕರ್ಸ್​ ಹಣಕ್ಕೆ ಬೇಡಿಕೆ ಇಡುತ್ತಿರುವುದಾಗಿ ಅವರು ದೂರಿದ್ದಾರೆ.

Actor Suresh Heblikar Mail Hack
ನಟ ಸುರೇಶ್ ಹೆಬ್ಳೀಕರ್ ಮೇಲ್​ ಹ್ಯಾಕ್​, ಹಣಕ್ಕೆ ಬೇಡಿಕೆ
author img

By ETV Bharat Karnataka Team

Published : Oct 28, 2023, 7:09 PM IST

ನಟ ಸುರೇಶ್ ಹೆಬ್ಳೀಕರ್ ಮಾತನಾಡುತ್ತಿರುವುದು

ಧಾರವಾಡ: ಮಣಿಪುರ ಸಂಘರ್ಷವನ್ನು ಮುಂದಿಟ್ಟುಕೊಂಡು ಯಾರೋ ಕಿಡಿಗೇಡಿಗಳು ತಮ್ಮ ಇಮೇಲ್​ ಹ್ಯಾಕ್​ ಮಾಡಿ ಪರಿಚಯಸ್ಥರಿಗೆ ಹಣದ ಬೇಡಿಕೆ ಇಡುತ್ತಿರುವುದಾಗಿ ನಟ ಹಾಗೂ ಪರಿಸರವಾದಿ ಸುರೇಶ್​ ಹೆಬ್ಳೀಕರ್ ​ದೂರಿದ್ದಾರೆ. ಜೊತೆಗೆ ಈ ರೀತಿಯ ಇಮೇಲ್​ ನನ್ನ ಹೆಸರಿನಲ್ಲಿ ನಿಮಗೂ ಬಂದಲ್ಲಿ, ದಯವಿಟ್ಟು ಯಾರೂ ಹಣ ಕಳುಹಿಸಬೇಡಿ ಎಂದು ಮನವಿ ಮಾಡಿದ್ದಾರೆ. 'ಇಕೋ ವಾಚ್​' ಎಂಬ ಕಂಪನಿಯನ್ನು ಹೆಬ್ಳೀಕರ್​ ನಡೆಸುತ್ತಿದ್ದು, ವಿದೇಶದಲ್ಲಿರುವ ತಮ್ಮ ಅನೇಕ ಸ್ನೇಹಿತರಿಗೆ ಇಮೇಲ್​ ರವಾನಿಸಿ ಹಣಕ್ಕೆ ಬೇಡಿಕೆ ಇಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ನನ್ನ ಸ್ನೇಹಿತರೊಬ್ಬರು ಮೆಸೇಜ್​ ಮಾಡಿ ನೀನು ಹಣ ಬೇಕೆಂದು ಇಮೇಲ್​ ಮಾಡಿದ್ದೀಯಾ ಅಂತ ಕೇಳಿದ್ರು. ನಾನು ಇಲ್ಲ ಅಂತ ಹೇಳಿದೆ. ಒಂದು ಇಮೇಲ್​ನಲ್ಲಿ ನಿನ್ನ ಜೊತೆ ಏನೋ ಮಾತನಾಡಬೇಕು ಅಂತಿತ್ತು. ಇನ್ನೊಂದು ಇಮೇಲ್​ನಲ್ಲಿ, ಮಣಿಪುರದ ಸಂಘರ್ಷ ವಿಚಾರವಾಗಿ ಸರ್ಕಾರ ಯಾವುದೇ ರೀತಿಯಾಗಿ ಸ್ಪಂದಿಸುತ್ತಿಲ್ಲ. ಹಾಗಾಗಿ ಅಲ್ಲಿನ ಜನರಿಗೆ ಪರಿಹಾರವನ್ನು ನೀಡಬೇಕೆಂದಿರುವೆ. ಅದಕ್ಕೆ ನಿಮ್ಮಿಂದ ಸಾಧ್ಯವಾದಷ್ಟು ಹಣ ಕೊಡಿ ಎಂದೆಲ್ಲಾ ಹ್ಯಾಕರ್ಸ್​ ಕಥೆ ಕಟ್ಟಿ ನನ್ನ ಹೆಸರಿನಲ್ಲಿ ಸಂದೇಶ ರವಾನಿಸಿದ್ದರು" ಎಂದ ಹೆಬ್ಳೀಕರ್​​ ಈ ರೀತಿಯಾಗಿ ನನ್ನ ಸ್ನೇಹಿತರಿಗೆ, ಸಂಬಂಧಿಕರಿಗೆ ನನ್ನ ಹೆಸರಿನಲ್ಲಿ ಇಮೇಲ್​ ರವಾನೆಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನಕಲಿ ಖಾತೆ ತೆರೆದು ಅಕ್ರಮ ಹಣ ವ್ಯವಹಾರ ನಡೆಸಿದ ಹ್ಯಾಕರ್​: ರಿಯಾದ್​ನಲ್ಲಿ ಕಡಬದ ಯುವಕ ಜೈಲುಪಾಲು

"ನಿಮಗೆ ಏನಾದರೂ ಈ ರೀತಿಯಾಗಿ ನನ್ನ ಹೆಸರಿನಿಂದ ಅಥವಾ ಇಕೋ ವಾಚ್ ಹೆಸರಿನಿಂದ ಇಮೇಲ್​ ಬಂದಲ್ಲಿ, ಅದಕ್ಕೆ ದಯವಿಟ್ಟು ಪ್ರತಿಕ್ರಿಯೆ ನೀಡಬೇಡಿ. ಅದು ಫೇಕ್​. ನಾನು ಯಾರಲ್ಲೂ ಅನುದಾನ ಕೇಳಿಲ್ಲ. ಆ ರೀತಿಯ ಕೆಲಸನೂ ಮಾಡಲ್ಲ. ಮಣಿಪುರಕ್ಕೆ ಹೋಗಿ ಹಣ ಕೊಡೋದು ಅದೆಲ್ಲಾ ನನ್ನ ಕೈಯಿಂದ ಮಾಡುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಈ ರೀತಿಯ ಇಮೇಲ್​ ಏನಾದರೂ ನಿಮಗೆ ಬಂದಲ್ಲಿ ಅದಕ್ಕೆ ರೆಸ್ಪಾಂಡ್​ ಮಾಡಬೇಡಿ. ನಾನು ಈ ಬಗ್ಗೆ ದೂರು ದಾಖಲಿಸುತ್ತೇನೆ. ಯಾರೂ ಹಣ ಹಾಕಲು ಹೋಗಬೇಡಿ" ಎಂದು ಮನವಿ ಮಾಡಿದರು.

ಈ ಹಿಂದೆ ಬಾಲಿವುಡ್​ ನಟ ಗೋವಿಂದ್​ ಅವರ ಎಕ್ಸ್​ (ಹಿಂದಿನ ಟ್ವಿಟರ್​) ಹ್ಯಾಕ್​ ಮಾಡಿ, ಅದರಲ್ಲಿ ಹರಿಯಾಣ ಹಿಂಸಾಚಾರ ಪ್ರಕರಣದ ಬಗ್ಗೆ ಅಸಮಧಾನ ವ್ಯಕ್ತಪಡಿಸಲಾಗಿತ್ತು. ಶಾಂತಿ ಮತ್ತು ಏಕತೆಯನ್ನು ಪ್ರತಿಪಾದಿಸಿದ್ದರು. ಇದು​​ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ ಬೆನ್ನಲ್ಲೇ ಟ್ವಿಟರ್​ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು. ಈ ಟ್ವೀಟ್ ಗೋವಿಂದ ಹೆಸರಲ್ಲಿ ಬಂದಿತ್ತು. ಆದರೆ ಇದಕ್ಕೆ ಸ್ಪಷ್ಟನೆ ನೀಡಿದ್ದ ನಟ, ''ನಾನು ಆ ಟ್ವೀಟ್​ ಮಾಡಿಲ್ಲ, ನನ್ನ ತಂಡದವರೂ ಕೂಡ ​ಮಾಡಿಲ್ಲ. ಎಕ್ಸ್​​ ಅಕೌಂಟ್​ ಬಳಸದೇ ಬಹಳ ಸಮಯವಾಗಿದೆ. ನನ್ನ ಎಕ್ಸ್​​​ ಅಕೌಂಟ್​ ಹ್ಯಾಕ್​ ಆಗಿದೆ. ಯಾರೂ ಕೂಡ ನನ್ನನ್ನು ಗುರಿಯಾಗಿಸಬೇಡಿ. ನಾನು ಈ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಲು ಸೈಬರ್​ ಕ್ರೈಮ್​ ಇಲಾಖೆಗೆ ಕೋರುತ್ತೇನೆ'' ಎಂದು ತಿಳಿಸಿದ್ದರು.

ಇದನ್ನೂ ಓದಿ: ಇ-ಪ್ರೊಕ್ಯೂರ್‌ಮೆಂಟ್ ವೆಬ್‌ಸೈಟ್ ಹ್ಯಾಕ್ ಪ್ರಕರಣ: ಪಂಜಾಬ್ ಮೂಲದ ಆರೋಪಿ ಬೆಂಗಳೂರಿನಲ್ಲಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.