ಹುಬ್ಬಳ್ಳಿ: ತಾಲೂಕಿನ ಹಳ್ಳಿಯೊಂದರಲ್ಲಿ ನಾಮಕರಣ ನೆಪದಲ್ಲಿ ಇಡೀ ಕುಟುಂಬವನ್ನೆ ಮತಾಂತರ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಚಳಿಗಾಲದ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗಿದೆ. ಇದರ ನಡುವೆ ಈ ಪ್ರಕರಣ ಬೆಳಕಿಗೆ ಬಂದಿದೆ. ಹುಬ್ಬಳ್ಳಿ ತಾಲೂಕಿನ ಕೋಳಿವಾಡ ಗ್ರಾಮದಲ್ಲಿ ಮಗುವಿನ ನಾಮಕರಣದ ನೆಪದಲ್ಲಿ ಮತಾಂತರಕ್ಕೆ ಯತ್ನಿಸಲಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: ವಿಪಕ್ಷಗಳ ಪ್ರತಿಭಟನೆ ನಡುವೆಯೇ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಅಂಗೀಕಾರ
ಕೋಳಿವಾಡ ಗ್ರಾಮದ ಭೀಮಪ್ಪ ಭಜಂತ್ರಿ ಎಂಬುವರ ಮನೆಯಲ್ಲಿ ಬುಧವಾರ ಸಂಜೆ ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಆರ್‌ಜಿಎಸ್‌ನ ಡ್ಯಾನಿಯಲ್ ವಿಜಯರಾಜ್ ಹಾಗೂ ಫಾದರ್ ಅವರು 15ಕ್ಕೂ ಹೆಚ್ಚು ಕುಟುಂಬಗಳನ್ನು ಮತಾಂತರ ಮಾಡಲು ಒಂದೆಡೆ ಸೇರಿಸಿ ಅವರ ಧರ್ಮದ ಬಗ್ಗೆ ಪ್ರವಚನ ನೀಡಿದ್ದಾರೆ ಎನ್ನಲಾಗಿದೆ.
ಈ ಆರೋಪ ಸಂಬಂಧ ಫಾದರ್ ಸೇರಿದಂತೆ ಡ್ಯಾನಿಯಲ್ ವಿಜಯರಾಜ್ ಅವರನ್ನು ಹಿಡಿದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಗೆ ಒಪ್ಪಿಸಿ ತನಿಖೆಗೆ ಒಳಪಡಿಸಿದ್ದಾರೆ. ಭಜಂತ್ರಿ ಕುಟುಂಬದಲ್ಲಿ ಮಗುವಿನ ನಾಮಕರಣ ನಡೆಯುತ್ತಿದ್ದು, ತಮ್ಮ ಮಗುವಿಗೆ ಒಳ್ಳೆಯದಾಗಲಿ ಎಂದು ಶುಭಹಾರೈಸಲು ಫಾದರ್ಗಳನ್ನು ಕರೆಯಿಸಿದ್ದರಂತೆ, ಅಲ್ಲಿ ಮತಾಂತರ ಮಾಡುತ್ತಿರಲಿಲ್ಲ ನಾಮಕರಣದ ಕಾರ್ಯಕ್ರಮದಲ್ಲಿ ನಾವು ಭಾಗಿಯಾಗಿದ್ದೆವು ಎಂದು ಕ್ರೈಸ್ತ ಫಾದರ್ ಹೇಳಿದ್ದಾರೆ.