ಹುಬ್ಬಳ್ಳಿ: ಸಾರ್ವಜನಿಕ ಸ್ಥಳಗಳಲ್ಲಿ, ಗುಟ್ಕಾ ಚೀಲದಲ್ಲಿ 40.000 ರೂ. ಮೌಲ್ಯದ ಗಾಂಜಾವನ್ನು ಮಾರಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕುಂದಗೋಳ ಪೋಲಿಸರು ಯಶಸ್ವಿಯಾಗಿದ್ದಾರೆ.
ಬಾಬಾಷಾ ಮೋದಿನಷಾ ಮಕಾಂದಾರ (49) ಬಂಧಿತ ಆರೋಪಿಯಾಗಿದ್ದು, ಕುಂದಗೋಳ ಪಟ್ಟಣದ ಐಬಿ ಬಳಿ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲಿಸರು ಬಂಧಿತನಿಂದ 40,000 ರೂ. ಮೌಲ್ಯದ 4 ಕೆಜಿ 570 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಕುಂದಗೋಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.