ಧಾರವಾಡ: ಲಂಚ ಸ್ವೀಕರಿಸುತ್ತಿದ್ದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ವೆಂಕಟೇಶ್ ಇಬ್ರಾಹಿಂಪುರ ಎಂಬಾತ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಇಂಜಿನಿಯರ್ ಆಗಿರುವ ವೆಂಕಟೇಶ್ ಇಬ್ರಾಹಿಂಪುರ, ಸಿವಿಲ್ ಗುತ್ತಿಗೆದಾರ ಸಂದೇಶ್ ಎಂಬುವವರಿಗೆ ಕಟ್ಟಡ ನಿರ್ಮಾಣದ ಬಿಲ್ ಪಾವತಿ ಮಾಡಲು 60 ಸಾವಿರ ರೂಪಾಯಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಖಚಿತ ಮಾಹಿತಿ ಮೇರೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
70 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದ ವೆಂಕಟೇಶ್ ಮೊದಲ ಹಂತದಲ್ಲಿ 60 ಸಾವಿರ ಲಂಚ ಪಡೆಯುವಾಗ ಕಚೇರಿಯಲ್ಲಿಯೇ ಎಸಿಬಿ ಶಾಕ್ ನೀಡಿದೆ.