ಹುಬ್ಬಳ್ಳಿ: ಲಾಕ್ಡೌನ್ನಿಂದ ಮೂಕ ಪ್ರಾಣಿಗಳು ಆಹಾರಕ್ಕಾಗಿ ಪರದಾಡುವ ಸ್ಥಿತಿ ಬಂದಿದ್ದು, ಈ ಮೂಕ ಪ್ರಾಣಿಗಳ ಮೌನರೋಧನೆಗೆ ಮಹಿಳಾ ಪೊಲೀಸ್ ಪೇದೆಯೊಬ್ಬರು ಮಿಡಿದಿದ್ದಾರೆ.
ಕೇಶ್ವಾಪುರ ಸರ್ಕಲ್ನಲ್ಲಿ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ತಮಗೆಂದು ತಿನ್ನಲು ತಂದ ಬಾಳೆ ಹಣ್ಣುಗಳನ್ನು ಹಸಿದ ಹಸುವಿಗೆ ನೀಡುವುದರ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ಮಹಿಳಾ ಪೊಲೀಸ್ ಪೇದೆ ಜಿಲ್ಲೆಯ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಈ ಒಂದು ಕಾರ್ಯಕ್ಕೆ ಸಾರ್ವಜನಿಕರ ಪ್ರಶಂಸೆ ವ್ಯಕ್ತವಾಗಿದೆ.