ಧಾರವಾಡ: ಭತ್ತದ ಚೀಲಗಳನ್ನು ಕದ್ದು 36 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಶಂಕ್ರಪ್ಪ ಮಹಾದೇವಪ್ಪ ಜೊಡಗೇರಿ ಬಂಧಿತ ಆರೋಪಿಯಾಗಿದ್ದಾನೆ. ಧಾರವಾಡ ತಾಲೂಕಿನ ಎತ್ತಿನಗುಡ್ಡ ಗ್ರಾಮದ ನಿವಾಸಿಯಾಗಿರುವ ಶಂಕ್ರಪ್ಪ ಅವರನ್ನು ಧಾರವಾಡ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಆರೋಪಿ 1983 ರಲ್ಲಿ ಮುತಾಲಿಕ ದೇಸಾಯಿ ಎನ್ನುವವರ 25 ಭತ್ತದ ಚೀಲ ಕಳುವು ಮಾಡಿ ಪರಾರಿಯಾಗಿದ್ದ.
8 ಮಂದಿ ಆರೋಪಿಗಳ ಪೈಕಿ 7 ಮಂದಿ ಬಂಧನವಾದ್ರೆ 8ನೇ ಆರೋಪಿಯಾಗಿದ್ದ ಶಂಕ್ರಪ್ಪ ಮಹಾದೇವಪ್ಪ ಪರಾರಿಯಾಗಿದ್ದ. ಹೊರ ರಾಜ್ಯದಲ್ಲಿ ತಲೆ ಮರೆಸಿಕೊಂಡಿದ್ದ ಈತನನ್ನು ಕಡೆಗೂ ಪೊಲೀಸರು ಬಂಧಿಸಿದ್ದು, ಸುಮಾರು 36 ವರ್ಷಗಳ ಹಿಂದಿನ ಈ ಪುರಾತನ ಪ್ರಕರಣ ಅಂತ್ಯಕಂಡಿದೆ.