ಹುಬ್ಬಳ್ಳಿ: ಕಳ್ಳತನ ಮಾಡಲು ಹೋದ ಖದೀಮನೋರ್ವ ಅಪಾರ್ಟ್ಮೆಂಟ್ ಮೇಲಿಂದ ಬಿದ್ದಿರುವ ಘಟನೆ ವಿದ್ಯಾನಗರದ ಚೆನ್ನಮ್ಮ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
ತಾರಿಹಾಳ ಗ್ರಾಮದ ಪುಟ್ಟರಾಜ ಎಂಬಾತ ಅಪಾರ್ಟ್ಮೆಂಟ್ ಮೇಲಿಂದ ಬಿದ್ದ ಕಳ್ಳ. ಆಗಸ್ಟ್ 30ರಂದು ತಡರಾತ್ರಿ ಕಂಠಪೂರ್ತಿ ಕುಡಿದು ಕಳ್ಳತನ ಮಾಡಲು ವಿದ್ಯಾನಗರದ ಚೆನ್ನಮ್ಮ ಅಪಾರ್ಟ್ಮೆಂಟ್ಗೆ ಹೋಗಿದ್ದಾನೆ. ಈ ವೇಳೆ ಆಯ ತಪ್ಪಿ ಬಿದ್ದು ಗಾಯಗಳಾಗಿವೆ. ಬಳಿಕ ತೀವ್ರವಾಗಿ ಗಾಯಗೊಂಡ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.