ETV Bharat / state

ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ದೇವಸ್ಥಾನದ ಮುಂದೆಯೇ ಮಾವನ ಕೊಂದ ಅಳಿಯಂದಿರು - ಆಸ್ತಿಗಾಗಿ ಮಾವನ ಕೊಂದ ಅಳಿಯಂದಿರು

ಆಸ್ತಿಗಾಗಿ ಮಾವನನ್ನೇ ಅಳಿಯಂದಿರು ಹತ್ಯೆ ಮಾಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ಮಾವನ ಕೊಲೆ
ಮಾವನ ಕೊಲೆ
author img

By

Published : Jan 20, 2023, 12:33 PM IST

ಹುಬ್ಬಳ್ಳಿ: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಆಸ್ತಿ ಜಗಳದಲ್ಲಿ ಮಾವನನ್ನೇ ಅಳಿಯಂದಿರು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾದ ಘಟನೆ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದಲ್ಲಿ ನಡೆದಿದೆ. ಶಿವಪ್ಪ ಅಡಿವೆಪ್ಪ ಮಳ್ಳೊಳ್ಳಿ (56) ಸಾವಿಗೀಡಾದ ವ್ಯಕ್ತಿ. ಶಿವಪ್ಪ ಮತ್ತು ಅಳಿಯಂದಿರಾದ ಗುರಪ್ಪ, ಷಣ್ಮುಕಪ್ಪಾ, ಗಂಗಪ್ಪಾ ಹಾಗೂ ಸಿದ್ರಾಮಪ್ಪರ ನಡುವೆ ಆಸ್ತಿಗಾಗಿ ಆಗಾಗ ಜಗಳ ನಡೆಯುತ್ತಿತ್ತು ಎಂದು ತಿಳಿದುಬಂದಿದೆ.

ದೇವಸ್ಥಾನದ ಮುಂದೆಯೇ ಮಾವನ ಕೊಲೆ: ಗ್ರಾಮದಲ್ಲಿನ ಕಲ್ಮೇಶ್ವರ ದೇವಸ್ಥಾನದ ಮುಂದೆ ಶಿವಪ್ಪನ ಅಳಿಯಂದಿರು ಜಗಳ ತೆಗೆದಿದ್ದಾರೆ‌. ಜಗಳ ಅತಿರೇಕಕ್ಕೆ ಹೋಗುತ್ತಿದ್ದ ಹಾಗೆ ಅಳಿಯಂದಿರು ತಾವು ತಂದಿದ್ದ ಮಾರಕಾಸ್ತ್ರಗಳಿಂದ ಶಿವಪ್ಪನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ಮೂಲಗಳಿಂದ ತಿಳಿದುಬಂದಿದೆ.

ಇತ್ತ ಶಿವಪ್ಪ ಪ್ರಾಣ ಬಿಡುತ್ತಿದ್ದಂತೆ ಅಳಿಯಂದಿರು ಸ್ಥಳದಿಂದ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹುಬ್ಬಳ್ಳಿಯ ಗ್ರಾಮೀಣ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಹಾಸನದಲ್ಲಿ ಹಳೇ ದ್ವೇಷಕ್ಕೆ ಯುವಕನ ಕೊಲೆ: ಬೆಂಗಳೂರಿನಲ್ಲಿ ಬಾಮೈದುನನ ಹತ್ಯೆ ಆರೋಪಿ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.