ETV Bharat / state

ಧಾರವಾಡ: ಮದ್ಯದ ಅಮಲಿನಲ್ಲಿ ಪತ್ನಿ ಹತ್ಯೆ ಮಾಡಿದ ಪತಿ - ಧಾರವಾಡ ಕೊಲೆ ಸುದ್ದಿ

ಗದಿಗೆಪ್ಪ ಪಠಾತ್ ಎಂಬಾತ ವ್ಯಕ್ತಿ ಕುಡಿದ ಅಮಲಿನಲ್ಲಿ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಆರೋಪಿ ಪರಾರಿಯಾಗಿದ್ದು, ಪೊಲೀಸರು ಆತನಿಗಾಗಿ ಶೋಧ ನಡೆಸುತ್ತಿದ್ದಾರೆ.

A husband who killed his wife at dharawada
ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ
author img

By

Published : Sep 15, 2022, 3:29 PM IST

Updated : Sep 15, 2022, 4:02 PM IST

ಧಾರವಾಡ: ಮದ್ಯದ ಅಮಲಿನಲ್ಲಿ ಪತಿಯೋರ್ವ ಪತ್ನಿಯನ್ನು ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಧಾರವಾಡದ ಕೋಳಿಕೇರಿಯಲ್ಲಿ ನಡೆದಿದೆ. ಮಂಜವ್ವ ಪಠಾತ್ (42) ಎಂಬ ಮಹಿಳೆ ಹತ್ಯೆಗೀಡಾದವರು. ಪತಿ ಗದಿಗೆಪ್ಪ ಪಠಾತ್ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.

ಮದ್ಯದ ಅಮಲಿನಲ್ಲಿ ಪತ್ನಿ ಹತ್ಯೆ ಮಾಡಿದ ಪತಿ

ಗದಿಗೆಪ್ಪ ಮದ್ಯವ್ಯಸನಿಯಾಗಿದ್ದು, ಗುರುವಾರ ಮದ್ಯ ಕುಡಿದು ಬಂದು ಹೊಲದಲ್ಲಿ ಮೂಲಂಗಿ ತೊಳೆಯುತ್ತ ಕುಳಿತಿದ್ದ ಪತ್ನಿಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ. ಹತ್ಯೆ ಮಾಡಿದ ನಂತರ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ.

ಸ್ಥಳಕ್ಕೆ ಭೇಟಿ ನೀಡಿದ ಶಹರ್​ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಬಂಧನಕ್ಕೆ ಶೋಧ ಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ: ಅನೈತಿಕ ಸಂಬಂಧ: ಗ್ರಾಮ ಪಂಚಾಯ್ತಿ ಸದಸ್ಯ ಸೇರಿದಂತೆ ಪತ್ನಿ ಕೊಲೆ ಮಾಡಿದ ಗಂಡ

Last Updated : Sep 15, 2022, 4:02 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.