ETV Bharat / state

ಕುಡಿದ ಮತ್ತಿನಲ್ಲಿ ಗಲಾಟೆ-ಬಿಡಿಸಲು ಮುಂದಾದ ಬಾರ್ ಸಿಬ್ಬಂದಿ ಮೇಲೆ ಹಲ್ಲೆ! - drunken man assaulted on bar staff

ಕುಡಿದ ಅಮಲಿನಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ ಆಗಿದ್ದು, ಅದನ್ನು ಬಿಡಿಸಲು ಹೋದ ಬಾರ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ..

A drunken man assaulted on Hubli bar staff
ಹುಬ್ಬಳ್ಳಿ ಬಾರ್ ಸಿಬ್ಬಂದಿ ಮೇಲೆ ಹಲ್ಲೆ
author img

By

Published : Jun 28, 2022, 5:13 PM IST

ಹುಬ್ಬಳ್ಳಿ(ಧಾರವಾಡ) : ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ಬಾರ್ ಸಿಬ್ಬಂದಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಿನ್ನೆ ತಡರಾತ್ರಿ ಹುಬ್ಬಳ್ಳಿಯ ಶಿರೂರ ಪಾರ್ಕ್‌ನ ಸಿಲ್ವರ್ ಸ್ಟೋನ್ ರೆಸ್ಟೋರೆಂಟ್‌ನಲ್ಲಿ ನಡೆದಿದೆ.

ಬಾರ್‌ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದವರ ನಡುವೆ ಗಲಾಟೆ ಆಗಿದೆ. ಗಲಾಟೆ ಬಿಡಿಸಲು ಮುಂದಾದ ಸಿಬ್ಬಂದಿಗೆ ಮೂವರು ಸೇರಿ ಒಡೆದ ಬಾಟಲಿಯಿಂದ ಹಲ್ಲೆ ನಡೆಸಿ ಹತ್ಯೆಗೆ ಪ್ರಯತ್ನಿಸಿದ್ದಾರೆ. ಹೊಸೂರಿನ ಸುಪ್ರೀತ್, ಆದಿತ್ಯ ಹಾಗೂ ಪ್ರಜ್ವಲ್ ಎಂಬಾತ ಸೇರಿ ನಾಲ್ವರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಯಗೊಂಡು ಚಿಕಿತ್ಸೆ ಪಡೆದ ಬಾರ್ ಸಿಬ್ಬಂದಿ

ಆರೋಪಿಗಳು ಸ್ನೇಹಿತರ ಜೊತೆ ಮದ್ಯ ಸೇವನೆ ಮಾಡುತ್ತಿದ್ದಾಗ ಪಕ್ಕದ ಟೇಬಲ್‌ನಲ್ಲಿ ಕುಳಿತವರ ಜೊತೆ ಜಗಳ ಮಾಡಿ ಬಾಟಲಿ ಒಡೆದು ಹಲ್ಲೆಗೆ ಯತ್ನಿಸಿದ್ದರು. ಬಾರ್ ವ್ಯವಸ್ಥಾಪಕ ಮಂದಾ‌ರ್ ಮತ್ತು ಸಿಬ್ಬಂದಿ ಮಿಥುನ್ ಅದನ್ನು ತಡೆಯಲು ಮುಂದಾದಾಗ ಅಶ್ಲೀಲವಾಗಿ ಬೈದು ಅವರ ಮೇಲೆಯೇ ಹಲ್ಲೆ ನಡೆಸಿದ್ದಾರೆ.

ಅದನ್ನು ತಪ್ಪಿಸಲು ಹೋದ ಸಿಬ್ಬಂದಿ ರವಿ, ಮಂಜುನಾಥ ಮತ್ತು ಸಂತೋಷ ಅವರ ಮೇಲೂ ಹಲ್ಲೆ ನಡೆಸಿದ್ದಾರೆ. ಆರೋಪಿಗಳು ಸಂತೋಷ ಅವರ ತಲೆಗೆ ಬಾಟಲಿಯಿಂದ ಹೊಡೆದಿದ್ದಾರೆ. ಬಾರ್​ನಲ್ಲಿ ಹಾನಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ರಾತ್ರೋರಾತ್ರಿ ಕಾರಿಗೆ ಬೆಂಕಿ ಇಟ್ಟ ಕಿಡಿಗೇಡಿ.. ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.