ಹುಬ್ಬಳ್ಳಿ: ಕೊರೊನಾ ವೈರಸ್ ಭೀತಿ ಹಿನ್ನೆಲೆ ತಾಲೂಕಿನ ಕುಸುಗಲ್ ಗ್ರಾಮದ ಮಾರುತಿ ನಗರದ ನಿವಾಸಿ ಮಹೇಶ ಮತ್ತು ಲಕ್ಷ್ಮಿ ಎಂಬುವವರು ಸರಳವಾಗಿ ಮದುವೆ ಆಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಲಾಕ್ಡೌನ್ ಹಿನ್ನೆಲೆ, ಮದುವೆ ಕಾರ್ಯಗಳಿಗೆ ಸರ್ಕಾರ ಕೆಲವು ನಿಬಂಧನೆಗಳು ಹಾಗೂ ಸೂಚನೆಗಳನ್ನು ನೀಡಿದ್ದು, ಅದರಂತೆ ಕುಟುಂಬದ 20 ಸದಸ್ಯರಷ್ಟೇ ಈ ಮದುವೆಯಲ್ಲಿ ಭಾಗಿಯಾಗುವ ಮೂಲಕ ಯಾವುದೇ ಆಡಂಬರ ಮಾಡದೇ ಸರಳಾತಿ ಸರಳವಾಗಿ ಈ ಜೋಡಿ ಮದುವೆ ಮಾಡಿಕೊಂಡಿದ್ದಾರೆ.
ಇನ್ನು ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಬಳಸುವಂತೆ ಮದುವೆಯಲ್ಲಿ ವಧು - ವರ ಜಾಗೃತಿ ಮೂಡಿಸಿದ್ದು ಸಂಬಂಧಿಕರಿಗೆ ವಿಶೇಷವಾಗಿತ್ತು.