ETV Bharat / state

ಮಳೆ ನೀರಿನ ರಭಸಕ್ಕೆ ಕುಸಿದು ಬಿದ್ದ ಗೋಡೆ: ಬಾಲಕ ದಾರುಣ ಸಾವು - A boy died after a wall collapsed in Hubli

ಕಟ್ಟಡಕ್ಕೆ ನುಗ್ಗಿದ ಮಳೆನೀರಿನ ರಭಸಕ್ಕೆ ಗೋಡೆಯೊಂದು ಕುಸಿದು ಬಿದ್ದು ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

a-boy-died-after-a-wall-collapsed-in-hubli
ಮಳೆ ನೀರಿನ ರಭಸಕ್ಕೆ ಕುಸಿದು ಬಿದ್ದ ಗೋಡೆ : ಬಾಲಕ ದಾರುಣ ಸಾವು
author img

By

Published : Jul 27, 2022, 10:01 PM IST

ಹುಬ್ಬಳ್ಳಿ : ಮಳೆ ನೀರಿನ ರಭಸಕ್ಕೆ ಗೋಡೆ ಕುಸಿದು ಬಾಲಕನೊಬ್ಬ ಮೃತಪಟ್ಟರುವ ಘಟನೆ ನಗರದ ಗೋಕುಲ ರೋಡ್ ಪೊಲೀಸ್ ಠಾಣೆ ಎದುರು ನಡೆದಿದೆ. ಮೃತ ಬಾಲಕನನ್ನು ದರ್ಶನ್ (16) ಎಂದು ಗುರುತಿಸಲಾಗಿದೆ.

ಮಳೆ ನೀರಿನ ರಭಸಕ್ಕೆ ಕುಸಿದು ಬಿದ್ದ ಗೋಡೆ : ಬಾಲಕ ದಾರುಣ ಸಾವು

ಇಂದು ಸಂಜೆ ಸುರಿದ ಭಾರಿ ಮಳೆಗೆ ದಾರುವಾಲಾ ವೈನ್ ಶಾಪ್ ಕೆಳಗಿನ ಕಟ್ಟಡಕ್ಕೆ ರಭಸವಾಗಿ ನೀರು ನುಗ್ಗಿದೆ. ಈ ವೇಳೆ ಬಿಲ್ಡಿಂಗ್ ಒಳಗೆ ಬರುತ್ತಿದ್ದ ನೀರನ್ನು ಹೊರಹಾಕುವಾಗ ಗೋಡೆ ಕುಸಿದು ದರ್ಶನ ಮೇಲೆ ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದರ್ಶನ್ ಇಲ್ಲಿನ ಕಟಿಂಗ್ ಅಂಗಡಿಯ ಮಾಲೀಕನ ಜೊತೆಗೆ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಸದ್ಯ ಮೃತ ದರ್ಶನ್ ಮೃತದೇಹವನ್ನು ಕಿಮ್ಸ್ ಶವಾಗಾರಕ್ಕೆ ರವಾನೆ ಮಾಡಲಾಗಿದ್ದು, ಸ್ಥಳಕ್ಕೆ ಕಾರ್ಪೊರೇಟರ್ ಚೇತನ್ ಹಿರೇಕೆರೂರು ಹಾಗೂ ಗೋಕುಲ್ ಠಾಣಾ ಇನ್ಸ್​​​ಪೆಕ್ಟರ್​​ ಜೆ ಎಂ ಕಾಲಿಮಿರ್ಚಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಓದಿ : ರೋಡ್ ರೋಮಿಯೋಗೆ ಚಪ್ಪಲಿ ಏಟು.. ನಡುರಸ್ತೆಯಲ್ಲೇ ಥಳಿಸಿದ ಮಹಿಳೆ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.