ETV Bharat / state

85 ವರ್ಷಗಳ ಹಳೆಯ ಪ್ರಕರಣ ಲೋಕ ಅದಾಲತ್​ನಲ್ಲಿ ಇತ್ಯರ್ಥ - ಈಟಿವಿ ಭಾರತ ಕನ್ನಡ

85 ವರ್ಷಗಳಿಂದ ರಸ್ತೆಗಾಗಿ ನಡೆಯುತ್ತಿದ್ದ ಗಲಾಟೆ ಪ್ರಕರಣ ಲೋಕ ಅದಾಲತ್​​ನಲ್ಲಿ ಇತ್ಯರ್ಥಗೊಳ್ಳಲಿದೆ.

ಹಳೆಯ ಪ್ರಕರಣ ಲೋಕ ಅದಾಲತ್​ನಲ್ಲಿ ಇತ್ಯರ್ಥ
ಹಳೆಯ ಪ್ರಕರಣ ಲೋಕ ಅದಾಲತ್​ನಲ್ಲಿ ಇತ್ಯರ್ಥ
author img

By

Published : Jun 8, 2023, 8:54 AM IST

ಹುಬ್ಬಳ್ಳಿ: ಸುಮಾರು 85 ವರ್ಷಗಳ ಹಳೆಯ ಪ್ರಕರಣವೊಂದನ್ನು ಹುಬ್ಬಳ್ಳಿ ಜೆಎಂಎಫ್​ಸಿ ನ್ಯಾಯಾಲಯ ಜುಲೈ 8 ರಂದು ನಡೆಯುವ ಲೋಕ ಆದಾಲತ್​ನಲ್ಲಿ ಇತ್ಯರ್ಥ ಪಡಿಸಲಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಬಾರಿ ರಸ್ತೆಯ ಸರ್ವೆ ಮಾಡುವ ಮೂಲಕ ವಾದ ಮಂಡಿಸಲಾಗಿತ್ತು, ಇದೀಗ ಸುದೀರ್ಘ 85 ವರ್ಷಗಳ ವ್ಯಾಜ್ಯ ಇತ್ಯರ್ಥವಾಗಿದೆ. ಕಕ್ಷಿಗಾರರು ರಾಜಿಯಾಗಿ ಸಾಮೂಹಿಕವಾಗಿ ಉಪಯೋಗಿಸುತ್ತೇವೆ ಎಂದು ರಾಜಿ ಪತ್ರ ಸಲ್ಲಿಸಿದ್ದಾರೆ.

ನಗರದ ಜೆಎಂಎಫ್​ಸಿ ನ್ಯಾಯಾಲಯದಲ್ಲಿ ಕಕ್ಷಿಗಾರರು ಮಾತನಾಡಿ, ಪ್ರತಿವಾದಿ ಪರ ವಕೀಲರು ಹಾಗೂ ಪ್ರಧಾನ ದಿವಾನಿ ನ್ಯಾಯಾಧೀಶರು ನಗರದ ಸಿಬಿಟಿ ಬಳಿ ಇರುವಂತಹ ರಸ್ತೆ ವಿವಾದ 85ವರ್ಷಗಳ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ಪರ ಹಾಗೂ ವಿರೋಧ ಕಕ್ಷಿಗಾರರನ್ನು ರಾಜಿ ಸಂಧಾನ ಮಾಡಿಸುವ ಮೂಲಕ ಮಾದರಿಯಾಗಿದ್ದಾರೆ. ನ್ಯಾಯಾಲಯ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುವಂತಹ ಕಾರ್ಯವನ್ನು ಮಾಡಲಿದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಬಳಿಕ ಪ್ರಧಾನ ದಿವಾನಿ ನ್ಯಾಯಾಧೀಶರಾದ ರಾಜಶೇಖರ ತಿಳಗಂಜಿ ಮಾತನಾಡಿ, ಜೆಎಂಎಫ್​ಸಿಯಲ್ಲಿ 85 ವರ್ಷಗಳ ಪ್ರಕರಣವೊಂದನ್ನು ರಾಜಿ ಮಾಡಲಾಗಿದೆ. ರಸ್ತೆ ಕುರಿತು ಇಬ್ಬರು ಕಕ್ಷಿಗಾರರ ನಡುವೆ ಜಗಳವಿತ್ತು. ಸುಮಾರು 85 ವರ್ಷಗಳಿಂದ ಈ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಜಗಳ ಆಗುತಿತ್ತು. ಇದಕ್ಕಾಗಿ ಕಕ್ಷಿದಾರರು ಆರು ಬಾರಿ ಕೋರ್ಟಿನಿ ಮೆಟ್ಟಿಲೇರಿದ್ದರು. ಆರು ಬಾರಿ ತೀರ್ಪು ಬಂದಿತ್ತು. ಅಲ್ಲದೇ ಆರು ಬಾರಿ ರಸ್ತೆ ಸರ್ವೇಯನ್ನೂ ಮಾಡಲಾಗಿತ್ತು. ಆದರೂ ಕೂಡು ಕಕ್ಷಿದಾರರಿಬ್ಬರಲ್ಲಿ ಜಗಳ ಮುಂದುವರೆದಿತ್ತು. ಇದೀಗ ಈ ಇಬ್ಬರು ಕಕ್ಷಿದಾರರನ್ನು ಜನತಾ ನ್ಯಾಯಾಲಯದಲ್ಲಿ ರಾಜಿ ಮಾಡಿಸಿದ್ದೇವೆ. ಇಬ್ಬರು ಸಾಮೂಹಿಕವಾಗಿ ಬಳಸುವುದಾಗಿ ಜಾರಿ ಪತ್ರವನ್ನು ಸಲ್ಲಿಸಿದ್ದಾರೆ.

ಇದಕ್ಕೆ ಎಲ್ಲ ವಕೀಲರು ಸಹಾಕರ ನೀಡಿದ್ದರಿಂದ 85 ವರ್ಷದ ಹಳೆಯ ಪ್ರಕಣ ಇತ್ಯರ್ಥವಾಗಿದೆ. ಪ್ರತಿನಿತ್ಯ 8-10 ಪ್ರಕರಣಗಳು ರಾಜಿ ಸಂಧಾನ ಮೂಲಕ ಇತ್ಯರ್ಥವಾಗುತ್ತಿದ್ದು, ಅದಕ್ಕಾಗಿ ಜುಲೈ 8 ರಂದು ನಡೆಯುವ ಲೋಕ್ ಅದಾಲತ್​ ನಲ್ಲಿ ಕಕ್ಷಿಗಾರರು ತಮ್ಮ ಹಳೆಯ ಕೇಸ್​ ಗಳಿದ್ದರೆ ತಮ್ಮ ವಕೀಲರ ಸಹಕಾರದೊಂದಿಗೆ ಇತ್ಯರ್ಥ ಮಾಡಿಕೊಳ್ಳಬೇಕೆಂದು ಮನವಿ ಇದೇ ವೇಳೆ ಮನವಿ ಮಾಡಿದರು.

ವೈಕ್ತಿಕ ಕಾರಣದಿಂದ ದಶಕಗಳ ಕಾಲ ಬೇರೆಯಾಗಿದ್ದ ದಂಪತಿ ಲೋಕ ಅದಾಲತ್​ನಲ್ಲಿ ಒಂದು

ತುಮಕೂರಿನಲ್ಲಿ ವೈಯಕ್ತಿಕ ಕಾರಣದಿಂದ 10 ವರ್ಷಗಳ ಕಾಲ ಬೇರೆಯಾಗಿದ್ದ ದಂಪತಿ ಈ ಹಿಂದೆ ನಡೆದಂತಹ ಲೋಕ ಅದಾಲತ್​ನಲ್ಲಿ ಒಂದಾಗಿದ್ದರು. ತಮ್ಮ 69ನೇ ವಯಸ್ಸಿನಲ್ಲಿ ವೃಯೋವೃದ್ಧರಿಬ್ಬರು ಒಂದಾಗಿದ್ದರು. ಈ ದಂಪತಿಗೆ ಓರ್ವ ಮಗಳಿದ್ದು, ಆಕೆಗೆ ಮದುವೆಯಾಗಿತ್ತು. 15 ವರ್ಷದ ಮೊಮ್ಮಗ ಸಹ ಇದ್ದ. ಇದೀಗ 10 ವರ್ಷಗಳಿಂದ ಬೇರ್ಪಟ್ಟ ಜೋಡಿ ಗುರುಹಿರಿಯರು ಹಾಗೂ ನ್ಯಾಯಾಲಯದ ಸಮ್ಮುಖದಲ್ಲಿ ಪುನಃ ದಾಂಪತ್ಯ ಜೀವನಕ್ಕೆ ವಾಪಸ್ ಆಗಿದ್ದರು.

ಇದನ್ನೂ ಓದಿ: ಅಕ್ರಮ ಡಿನೋಟಿಫಿಕೇಷನ್: ಬಿಎಸ್‌ವೈ ವಿರುದ್ಧದ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್

ಬಾಕಿ ಇದ್ದ ವಿವಿಧ ಪ್ರಕರಣಗಳಲ್ಲಿ 5 ಜೋಡಿಗಳನ್ನು ಒಂದು ಮಾಡಲಾಗಿತ್ತು. ದಂಪತಿ ಹಾರ ಬದಲಾಯಿಸಿಕೊಂಡು, ಒಬ್ಬರಿಗೊಬ್ಬರು ಸಿಹಿ ತಿನ್ನಿಸಿ ಒಂದಾಗಿದ್ದರು. ಬಾಕಿ ಇದ್ದ ಪ್ರಕರಣಗಳಲ್ಲಿ ದಂಪತಿಗಳು ಸಣ್ಣಪುಟ್ಟ ಮನಸ್ತಾಪ, ವೈಮನಸ್ಸುಗಳಿಂದ ದೂರಾಗಿದ್ದರು. ಜೀವನಾಂಶ, ವಿಚ್ಛೇದನಕ್ಕೆ ಅರ್ಜಿಯನ್ನ ಹಾಕಿದ್ದರು. ನ್ಯಾಯಾಧೀಶರು, ಮಧ್ಯಸ್ಥಿಕೆದಾರರು, ಎರಡೂ ಕಡೆಯ ವಕೀಲರು ಸೇರಿ ತಿಳುವಳಿಕೆ ಹೇಳಿ ನ್ಯಾಯಾಲಯಕ್ಕೆ ಬಂದಿದ್ದ ಐವರು ದಂಪತಿಗಳನ್ನು ಬುದ್ಧಿ ಹೇಳಿ ಒಂದು ಮಾಡಿದ್ದರು.

ಇದನ್ನೂ ಓದಿ: ಬೆಂಗಳೂರು ನಗರಕ್ಕೆ ದಕ್ಷ ಸಾರಿಗೆ ವ್ಯವಸ್ಥೆ ಅಗತ್ಯವಿದೆ: ಹೈಕೋರ್ಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.