ಧಾರವಾಡ : ಜಿಲ್ಲೆಯಲ್ಲಿ ಇಂದು ಒಂದೇ ದಿನ 157 ಜನರಲ್ಲಿ ಸೋಂಕು ಕಾಣಿಸಿದೆ. ಇದರಿಂದ ಸೋಂಕಿತರ ಸಂಖ್ಯೆ 1,731ಕ್ಕೆ ಏರಿಕೆಯಾಗಿದ್ರೆ, ಒಂದೇ ದಿನ 8 ಮಂದಿ ಮೃತಪಟ್ಟಿದ್ಧಾರೆ.
ಐಎಲ್ಐ ಸಮಸ್ಯೆಯಿಂದ ದಾಖಲಾದ 79 ಜನರಿಗೆ ಸೋಂಕು ದೃಢವಾಗಿದೆ. ಅಲ್ಲದೆ ಸೋಂಕಿತರ ಸಂಪರ್ಕದಿಂದ 59 ಜನರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ. ಇನ್ನು, ಅಂತರ್ ಜಿಲ್ಲಾ ಪ್ರವಾಸದಿಂದ 5 ಜನರಿಗೆ ಸೋಂಕು ದೃಢವಾದ್ರೆ, 14 ಸೋಂಕಿತರ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ಇದಲ್ಲದೆ ಒಂದೇ ದಿನ ಕೊರೊನಾದಿಂದಾಗಿ 8 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 52ಕ್ಕೆ ಏರಿದೆ. ಈ ನಡುವೆ ಇಂದು 69 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಒಟ್ಟು 593 ಜನ ಸೋಂಕಿನಿಂದ ಗುಣಮುಖರಾದ್ರೆ, ಇನ್ನು ಜಿಲ್ಲೆಯಲ್ಲಿ 1,086 ಸಕ್ರಿಯ ಪ್ರಕರಣಗಳಿವೆ.