ಧಾರವಾಡ: ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಬಿಇಓ ಸೇರಿ 6 ಅಧಿಕಾರಿಗಳ ಅಮಾನತು ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಆದೇಶ ಹೊರಡಿಸಿದ್ದಾರೆ.
ವಿಜಯಪುರ ಗ್ರಾಮೀಣ ವಲಯದ ಅಧಿಕಾರಿಗಳಾದ, ಬಿಇಒ ರುದ್ರಪ್ಪ ಹುರಳಿ, ಪ್ರಥಮ ದರ್ಜೆ ಸಹಾಯಕರಾದ ಎ.ಎಂ.ಅಕ್ಕಲಕೋಟಿ, ಬಿ.ಎನ್ ನಾಯಕ, ಎಸ್.ಡಿ ಚವ್ಹಾಣ, ಎಸ್‌ಡಿಎ ಎಲ್.ಎಚ್ ಬಾಗೇವಾಡಿ ಹಾಗೂ ಸಿಸಿಟಿ ಎನ್.ಎ ಬೀಳಗಿ ಅವರನ್ನು ಅಮಾನತು ಗೊಳಿಸಲಾಗಿದೆ.
ಸೆ.18 ಹಾಗೂ 19ರಂದು ಸಿದ್ಧಲಿಂಗಯ್ಯ ಖುದ್ದು ಭೇಟಿ ನೀಡಿ, ಕಡತಗಳ ಪರಿಶೀಲನೆ ಹಾಗೂ ನ್ಯೂನ್ಯತೆಗಳನ್ನು ಗುರುತಿಸಿ, ಕಾರಣ ಕೇಳಿ ಬಿಇಒ ಸಹಿತ 6 ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೀಗ ಕಾರಣ ಕೇಳುವ ನೋಟಿಸ್ಗೆ ಉತ್ತರ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.