ಹುಬ್ಬಳ್ಳಿ: ಕೊರೊನಾ ಭೀತಿ ಹಿನ್ನೆಲೆ ಗ್ರಾಮಕ್ಕೆ ಸಂಬಂಧಿಕರು ಬಂದ್ರೆ, ಗುಂಪು ಸೇರಿದರೆ ಭಾರಿ ದಂಡ ಕಟ್ಟಬೇಕಾಗುತ್ತದೆ. ಈ ಬಗ್ಗೆ ವಿಶೇಷ ರೀತಿಯಲ್ಲಿ ಗ್ರಾಮವೊಂದು ಎಚ್ಚರಿಕೆಯ ಕ್ರಮ ಕೈಗೊಂಡಿದೆ.
ಹುಬ್ಬಳ್ಳಿಯ ಗೋಕುಲ ಗ್ರಾಮದ ಜನರು ಕೊರೊನಾ ವೈರಸ್ ಹರಡದಂತೆ ತಡೆಯಲು ಹೊಸ ನಿಯಮ ಜಾರಿಗೆ ತಂದಿದ್ದಾರೆ. ಹೊರಗಿನವರು ಗ್ರಾಮಕ್ಕೆ ಬಂದ್ರೆ 5 ಸಾವಿರ ದಂಡ ಕಟ್ಟಬೇಕಾಗುತ್ತದೆ. ಜೊತೆಗೆ ಗುಂಪು ಗುಂಪಾಗಿ ಜನ ಸೇರಿದ್ರೆ, ಮಕ್ಕಳನ್ನು ಮನೆಯಿಂದ ಹೊರಗಡೆ ಕಳುಹಿಸಿದ್ರೆ ದಂಡ ಹಾಕುವುದಾಗಿ ಗ್ರಾಮಸ್ಥರು ಡಂಗುರ ಸಾರಿದ್ದಾರೆ.
ಕೊರೊನಾ ಮರಣ ಮೃದಂಗ ಬಾರಿಸುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ಲಾಕ್ಡೌನ್ಗೆ ಹುಬ್ಬಳ್ಳಿಯ ಗೋಕುಲ ಗ್ರಾಮದ ಬೆಂಬಲ ರಾಜ್ಯದ ಇತರೆ ಗ್ರಾಮೀಣ ಪ್ರದೇಶಗಳಿಗೆ ಮಾದರಿಯಾಗಿದೆ.