ಹುಬ್ಬಳ್ಳಿ: ಕೊರೊನಾ ಚಿಕಿತ್ಸೆ ಪರಿಕರಗಳಿಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ, ಇಂಡಿಯನ್ ಆಯಿಲ್ ಕಾರ್ಪೊರೇಶನ್ 50 ಲಕ್ಷ ರೂಪಾಯಿ ನೆರವು ನೀಡಿದ್ದು, ಕಂಪನಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡ ಸಚಿವರು, ಉತ್ತರ ಕರ್ನಾಟಕದ ಪ್ರತಿಷ್ಠಿತ ಸಂಸ್ಥೆಯಾದ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೋವಿಡ್-19 ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅದಕ್ಕೆ ಅನುಗುಣವಾಗಿ ಅವಶ್ಯಕ ಐಸಿಯು, ಬೆಡ್, ವೆಂಟಿಲೇಟರ್ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸ್ವಾಮ್ಯದ ಹಾಗೂ ಖಾಸಗಿ ಕಂಪನಿಗಳನ್ನು ಕೇಳಿಕೊಂಡ ಪ್ರಯುಕ್ತ ಜಿಲ್ಲಾಡಳಿತದ ಮೂಲಕ ಐಒಸಿಎಲ್ ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದೆ ಎಂದು ತಿಳಿಸಿದ್ದಾರೆ.
-
ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ #Covid19 ಕೊರೋನಾ ಚಿಕಿತ್ಸೆಗೆ ಅವಶ್ಯಕ ICU ಬೆಡ್, ವೆಂಟಿಲೇಟರ್ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ IOCL. ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಅದರನ್ವಯ IOCL ಕಂಪನಿಯು ಸಿ.ಎಸ್.ಆರ್. ಅಡಿ 50ಲಕ್ಷ ರೂ ಅನ್ನು ಮಂಜೂರ ಮಾಡಿದೆ. pic.twitter.com/JuzX9HL5h5
— Pralhad Joshi (@JoshiPralhad) August 19, 2020 " class="align-text-top noRightClick twitterSection" data="
">ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ #Covid19 ಕೊರೋನಾ ಚಿಕಿತ್ಸೆಗೆ ಅವಶ್ಯಕ ICU ಬೆಡ್, ವೆಂಟಿಲೇಟರ್ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ IOCL. ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಅದರನ್ವಯ IOCL ಕಂಪನಿಯು ಸಿ.ಎಸ್.ಆರ್. ಅಡಿ 50ಲಕ್ಷ ರೂ ಅನ್ನು ಮಂಜೂರ ಮಾಡಿದೆ. pic.twitter.com/JuzX9HL5h5
— Pralhad Joshi (@JoshiPralhad) August 19, 2020ನನ್ನ ಪ್ರಸ್ತಾವನೆಯ ಮೇರೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ #Covid19 ಕೊರೋನಾ ಚಿಕಿತ್ಸೆಗೆ ಅವಶ್ಯಕ ICU ಬೆಡ್, ವೆಂಟಿಲೇಟರ್ ಹಾಗೂ ಇತರೆ ವೈದ್ಯಕೀಯ ಪರಿಕರಗಳನ್ನು ಒದಗಿಸುವ ನಿಟ್ಟಿನಲ್ಲಿ IOCL. ಕಂಪನಿಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಅದರನ್ವಯ IOCL ಕಂಪನಿಯು ಸಿ.ಎಸ್.ಆರ್. ಅಡಿ 50ಲಕ್ಷ ರೂ ಅನ್ನು ಮಂಜೂರ ಮಾಡಿದೆ. pic.twitter.com/JuzX9HL5h5
— Pralhad Joshi (@JoshiPralhad) August 19, 2020
ಅದರನ್ವಯ ಐಒಸಿಎಲ್ ಕಂಪನಿಯ ಸಿಎಂಡಿ ಅವರಿಗೆ 50 ಲಕ್ಷ ರೂ. ಮಂಜೂರಾತಿಗೆ ಕೋರಿದ್ದರ ಫಲವಾಗಿ, ಇಂದು ಕಂಪನಿಯು ಸಿಎಸ್ಆರ್ ಅಡಿ ಕಿಮ್ಸ್ ಸಂಸ್ಥೆಗೆ ವೆಂಟಿಲೇಟರ್ ಹಾಗೂ ಐಸಿಯು ಬೆಡ್ ಖರೀದಿಗೆ ಹಣ ಮಂಜೂರು ಮಾಡಿ ಜಿಲ್ಲಾಡಳಿತಕ್ಕೆ ಪರಿಕರಗಳನ್ನು ಒದಗಿಸಲು ಸೂಚಿಸಿದೆ ಎಂದರು.
ಇಂತಹ ವಿಷಮ ಪರಿಸ್ಥಿತಿಯಲ್ಲಿ ತುರ್ತು ಬೇಡಿಕೆಗೆ ತಕ್ಷಣ ಸ್ಪಂದಿಸಿರುವ ಐಒಸಿಎಲ್ ಕಂಪನಿಗೆ ಕ್ಷೇತ್ರ ಜನತೆಯ ಪರವಾಗಿ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.